ಉತ್ತರಪ್ರದೇಶ: ಮುಂದಿನ ತಿಂಗಳು ನಡೆಯಲಿರುವ ರಾಮ ಮಂದಿರದ ನಿರ್ಮಾಣದ ಅಡಿಪಾಯ ಹಾಕುವ ಸಮಾರಂಭದ ಸಿದ್ಧತೆಗಳನ್ನು ಪರಿಶೀಲಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ ಅಯೋಧ್ಯೆಗೆ ಭೇಟಿ ನೀಡಿದರು.
ಹನುಮಾಗ್ರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಸಿಎಂ ಆದಿತ್ಯನಾಥ್ ಕರ್ಸೇವಕ್ಪುರಂನಲ್ಲಿ ದೇವಾಲಯಕ್ಕೆ ಕೆತ್ತಿದ ಕಲ್ಲುಗಳನ್ನೂ ಪರಿಶೀಲಿಸಿದರು.
ಮೊದಲಿಗೆ ಮುಖ್ಯಮಂತ್ರಿ ರಾಮ ಜನ್ಮಭೂಮಿ ದೇವಾಲಯದ ಸ್ಥಳದಲ್ಲಿ ಭಗವಾನ್ ರಾಮನಿಗೆ ನಮಸ್ಕಾರ ಮಾಡಿ ಲಕ್ಷ್ಮಣ, ಭರತ ಮತ್ತು ಶತ್ರುಘ್ನರ ವಿಗ್ರಹಗಳನ್ನು ಹೊಸ ‘ಆಸನ’ಗಳ ಮೇಲೆ ಇಟ್ಟರು.
ಕರ್ಸೇವಕ್ಪುರಂನಲ್ಲಿ, ಮುಖ್ಯಮಂತ್ರಿಗಳು ನೆರೆದಿದ್ದವರೊಂದಿಗೆ ಮಾತುಕತೆ ನಡೆಸಿದರು ಮತ್ತು ಕರೋನಾ ಸಾಂಕ್ರಾಮಿಕದ ಮಧ್ಯೆ ‘ಭೂಮಿ ಪೂಜ’ ಕಾರ್ಯಕ್ರಮದಲ್ಲಿ ಯಾರಾದರೂ ಭಾಗವಹಿಸಲು ಸಾಧ್ಯವಾಗದಿದ್ದರೆ, ಅವರು ಅದನ್ನು ಚಿಂತಿಸುವ ಅಗತ್ಯವಿಲ್ಲವೆಂದರು.