ಮಂಗಳೂರಿನ ಅಂಚೆ ಇಲಾಖೆಯ ಸಿಬ್ಬಂದಿಗಳಿಗೆ ಕೊರೊನಾ

0
205
Tap to know MORE!

ಮಂಗಳೂರು : ಅಂಚೆ ಇಲಾಖೆಯ ಇಬ್ಬರು ಸಿಬ್ಬಂದಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಮಂಗಳೂರಿನ 13 ಅಂಚೆ ಕಚೇರಿಗಳು ಸೋಮವಾರದಂದು ಬಂದ್ ಆಗಲಿದೆ.

ಮಂಗಳೂರಿನ ಪ್ರಧಾನ ಅಂಚೆ ಕಚೇರಿಯ ಇಬ್ಬರು ಸಿಬ್ಬಂದಿಗೆ ಇಂದು ಕೊರೊನಾ ಪಾಸಿಟಿವ್ ವರದಿ ಬಂದಿದ್ದು ,ಸೋಂಕಿತರು ಅಂಚೆ ಇಲಾಖೆಯ ಕ್ಯಾಶ್ ಓವರ್ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಮಂಗಳೂರಿನ ವಿವಿಧ ಅಂಚೆ ಇಲಾಖೆಗೆ ತೆರಳಿ ನಗದು ವಹಿವಾಟು ನೋಡಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಇವರು ಕರ್ತವ್ಯಕ್ಕೆ ತೆರಳಿರುವ 13 ಅಂಚೆ ಕಚೇರಿಗಳಿಗೆ ಆತಂಕ ಎದುರಾಗಿದೆ.

ಘಟನೆ ಹಿನ್ನೆಲೆಯಲ್ಲಿ ಮಂಗಳೂರಿನ ಪಾಂಡೇಶ್ವರದಲ್ಲಿರುವ ಪ್ರಧಾನ ಅಂಚೆ ಕಚೇರಿ, ಹಂಪನಕಟ್ಟಾ, ಅಶೋಕನಗರ, ಗಾಂಧಿನಗರ, ಬೋಳೂರು, ಕೂಳೂರು, ಕೊಂಚಾಡಿ, ಕಾವೂರು, ಬಿಜೈ, ಕೊಡಿಯಾಲ್ ಬೈಲ್, ಫಳ್ನೀರ್, ಫಿಶರಿಸ್ ಕಾಲೇಜ್, ಮಂಗಳೂರು ಕಲೆಕ್ಟರೇಟ್, ಎಸ್ ಒ ಅಂಚೆ ಕಚೇರಿಗಳು ಸೋಮವಾರದಂದು ಸಾರ್ವಜನಿಕ ಸೇವೆಗೆ ಲಭ್ಯ ವಿರುವುದಿಲ್ಲ ಎಂದು ತಿಳಿದು ಬಂದಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಪ್ರಧಾನ ಅಂಚೆ ಕಚೇರಿಯನ್ನು ಇಂದು ಸ್ಯಾನಿಟೈಸೇಶನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಎಲ್ಲಾ ಅಂಚೆ ಕಚೇರಿಗಳಿಗೂ ಸ್ಯಾನಿಟೈಸೇಶನ್ ಮಾಡಲಾಗಿದ್ದು, ಸೋಮವಾರದವರೆಗೆ 13 ಅಂಚೆ ಕಚೇರಿ ಮುಚ್ಚಲಿವೆ. ಆದ್ದರಿಂದ ಸಾರ್ವಜನಿಕ ಸೇವೆ ಲಭ್ಯವಿರುವುದಿಲ್ಲ ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಎನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here