ಮಂಗಳೂರಿನ ಎನ್‌ಎಂಪಿಟಿಗೂ ತಟ್ಟಿದ ಕೊರೊನಾ ಬಿಸಿ

0
123
Tap to know MORE!

ಮಂಗಳೂರು: ಭಾರತದ ಪ್ರಮುಖ ಬಂದರುಗಳಲ್ಲಿ ಒಂದು ಆಗಿರುವ ನವ ಮಂಗಳೂರು ಬಂದರಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಅನೇಕ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಹೆಚ್ಚಿನವರು ಸ್ಥಳೀಯರೇ ಆಗಿದ್ದಾರೆ ಎಂದೂ ತಿಳಿದುಬಂದಿದೆ

ಕೆಲವೊಂದು ಮೂಲಗಳ ಪ್ರಕಾರ ಎನ್‌ಎಂಪಿಟಿಯ ಆಡಳಿತ ವಿಭಾಗದಲ್ಲಿ ಕಳೆದ ಒಂದು ವಾರದಿಂದ 20 ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ.
ಎನ್‌ ಎಂಪಿಟಿ ಆಡಳಿತ ವಿಭಾಗ ಬಂದರಿನಿಂದ ದೂರ ಇರುವುದರಿಂದ ಬಂದರಿನ ವಹಿವಾಟಿಗೆ ಧಕ್ಕೆಯಾಗಿಲ್ಲ ಎನ್ನಲಾಗಿದೆ.

ಕಂಟೈನರ್ ಗಳನ್ನು ಹಡಗಿನಿಂದ ಟ್ರಕ್ ಗೆ ಲೋಡ್ ಮಾಡಲು ಸಿಬ್ಬಂದಿ ಕೊರತೆ ಎದುರಾದ ಕಾರಣ, ಬಂದರಿನ ಆಮದು ರಫ್ತು ಕಾರ್ಯದಲ್ಲಿ ವ್ಯತ್ಯಾಸ ಉಂಟಾಗಿದೆ. ಹೀಗಾಗಿ ಆಗಸ್ಟ್ ಕೊನೆಯವರೆಗೂ ಬಂದರು ನಿರ್ವಹಣೆಗೆ ತೊಡಕಾಗಿದೆ.

LEAVE A REPLY

Please enter your comment!
Please enter your name here