ಮಂಗಳೂರು ವಿವಿ: ʼಆಜಾದಿ ಕ ಅಮೃತ್‌ ಮಹೋತ್ಸವ್‌ʼ ಉದ್ಘಾಟಿಸಿದ ಡಾ. ಶಿಕಾರಿಪುರ ಕೃಷ್ಣಮೂರ್ತಿ

0
710
Tap to know MORE!

ಮಂಗಳೂರು: ದೇಶದಲ್ಲಿ ಜನರ ಮೂಲಭೂತ ಅಗತ್ಯಗಳಾದ ಆಹಾರ, ನೀರು ಮತ್ತು ವಿದ್ಯೆ ಉಚಿತವಾಗಿ ಸಿಗುವಂತಾಗಬೇಕು. ಇದನ್ನು ಬಿಟ್ಟು ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿಯಿಂದ ನೋಡಿದರೆ ಸಮಾಜ ಅಧೋಗತಿಗಿಳಿಯುವುದು ಖಚಿತ, ಎಂದು ನಿವೃತ್ತ ಪ್ರಾಧ್ಯಾಪಕ, ನಟ, ಚಿಂತಕ ಡಾ. ಶಿಕಾರಿಪುರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಎನ್‌ಎಸ್‌ಎಸ್‌ ಮುಂದಾಳತ್ವದಲ್ಲಿ ಆಯೋಜಿಸಲಾಗಿದ್ದ 75 ನೇ ಸ್ವಾತಂತ್ರ್ಯೋತ್ಸವದ ಉದ್ಘಾಟನೆ (ʼಆಜಾದಿ ಕ ಅಮೃತ್‌ ಮಹೋತ್ಸವ್‌ʼ) ನೆರವೇರಿಸಿ ಮಾತನಾಡಿದ ಅವರು, ದೇಶವಾಸಿಗಳು ಸ್ವಾತಂತ್ರ್ಯದ ಮೌಲ್ಯದ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ. ʼದೇಶ ಮೊದಲುʼ, ಜಾತಿ, ಧರ್ಮ ನಂತರ ಎಂಬ ಭಾವನೆ ಎಲ್ಲರ ಮನಸ್ಸಲ್ಲಿ ಮೂಡಬೇಕು, ಎಂದರು.

ಮಂಗಳೂರು: ಸೆಲೂನ್‌ಗೆ ನುಗ್ಗಿ ಮಹಿಳೆಗೆ ಕಿರುಕುಳ | ಆರೋಪಿ ದಾವೂದ್ ಬಂಧನ

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ, ಜಾರಿಗೆ ಬರಲಿರುವ ನೂತನ ಶಿಕ್ಷಣ ಪದ್ಧತಿ ದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಸಮಗ್ರ ಬದಲಾವಣೆ ತರಲಿದೆ. ದೇಶದ ಮುಂದಿನ 25-30 ವರ್ಷಗಳಷ್ಟು ಭವಿಷ್ಯ ಈ ಶಿಕ್ಷಣ ನೀತಿಯ ಮೇಲಿನ ನಿಂತಿದೆ, ಎಂದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಕುಲಸಚಿವ (ಆಡಳಿತ) ಡಾ. ಕಿಶೋರ್‌ ಕುಮಾರ್‌ ಸಿ ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿ ಎಲ್‌ ಧರ್ಮ ವಂದನಾರ್ಪಣೆಗೈದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು. ಎನ್‌ಎಸ್‌ಎಸ್‌ ಸಂಯೋಜಕ ಡಾ. ಗೋವಿಂದರಾಜು ಬಿ ಎಂ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here