ಮಂಗಳೂರು: ಕೆನರಾ ಕಾಲೇಜಿನಲ್ಲಿ ಪರಿಸರ ಲೆಕ್ಕಪರಿಶೋಧನೆ

0
804
Tap to know MORE!

ಮಂಗಳೂರು: ನಗರದ ಕೆನರಾ ಕಾಲೇಜಿನ ಐಕ್ಯೂಎಸಿ ರಚಿಸಿದ ಸಮಿತಿ ಮಂಗಳವಾರ ಕಾಲೇಜಿನಲ್ಲಿ ಪರಿಸರ ಲೆಕ್ಕಪರಿಶೋಧನೆ (Environmental Audit) ನಡೆಸಿತು.

ಆಡಿಟ್‌ನಲ್ಲಿ ಸಮಿತಿಯ ಬಾಹ್ಯ ಸದಸ್ಯರಾದ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿನ ಪರಿಸರ ಸಂಘದ ಉಪನಿರ್ದೇಶಕ ಡಾ.ಸಿದ್ದರಾಜು ಎಂ. ಎನ್, ಮಂಗಳೂರು ವಿಶ್ವವಿದ್ಯಾಲಯದ ಜೀವ ವಿಜ್ಞಾನ ಪ್ರಾಧ್ಯಾಪಕ ಡಾ.ಪ್ರಶಾಂತ್ ನಾಯಕ್ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಡಾ. ಸಿದ್ದರಾಜು, ಪರಿಸರ ಲೆಕ್ಕಪರಿಶೋಧನೆ ಒಂದು ನಿರ್ವಹಣಾ ಸಾಧನವಾಗಿದ್ದು ಸಂಸ್ಥೆಯ ಒಟ್ಟಾರೆ ಪರಿಸರ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ, ಎಂದರು.

ಇದನ್ನೂ ಓದಿ: ಒಂಟಿತನದಲ್ಲಿ ನಮ್ಮ ಜೊತೆ ನಿಲ್ಲುವ ಅದೃಶ್ಯ ಸ್ನೇಹಿತರೇ ಪುಸ್ತಕಗಳು: ನಮಿರಾಜ್

ಪರಿಸರ ಲೆಕ್ಕಪರಿಶೋಧನೆಗೆ ಯಾವುದೇ ಪ್ರಮಾಣಿತ ಮಾದರಿ ಇಲ್ಲದಿರುವುದರಿಂದ, ಸಮಿತಿ ಪ್ರಶ್ನಾವಳಿಯನ್ನು ತಯಾರಿಸಿ ವಿದ್ಯಾರ್ಥಿ ಸ್ವಯಂಸೇವಕರ ಸಹಾಯದಿಂದ ಮತ್ತು ಮಾಹಿತಿ ಸಂಗ್ರಹಿಸಿತು. ಇದನ್ನು ವಿಶ್ಲೇಷಿಸಿದ ಸಮಿತಿ ಕ್ಯಾಂಪಸ್‌ನಲ್ಲಿ ಆರೋಗ್ಯಕರ ವಾತಾವರಣವನ್ನು ಕಂಡುಕೊಂಡಿತು. ಇದೇ ವೇಳೆ ಪರಿಸರ ಸಂರಕ್ಷಣೆ ಕಾಯ್ದುಕೊಳ್ಳಲು ಸಮಿತಿ ಸಂಸ್ಥೆಗೆ ಅಲ್ಪಾವಧಿ ಮತ್ತು ದೀರ್ಘಾವಧಿ ಸಲಹೆಗಳನ್ನು ನೀಡಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಸಮಿತಿಯ ಆಂತರಿಕ ಸದಸ್ಯರಾದ ಪ್ರಾಂಶುಪಾಲೆ ಡಾ.ಪ್ರೇಮಲತಾ. ವಿ, ಐಕ್ಯೂಎಸಿ ಸಂಯೋಜಕರಾದ ದೇಜಮ್ಮ ಎ, ಹಾರ್ದಿಕ್ ಪಿ.ಚೌಹಾಣ್‌, ಮತ್ತು ಅಪರ್ಣ, ಸುಶಾಮಾ, ಧನ್ಯಶ್ರೀ, ರೂಪಾಶ್ರೀ, ಡಾ.ಯಶೋಧರ, ಮಧುಶ್ರೀ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here