ಮಂಗಳೂರು: ನಾಳೆಯಿಂದ ಖಾಸಗಿ ಬಸ್ ಸಂಚಾರ ಆರಂಭ | ದರ ಏರಿಕೆಯ ಬೇಡಿಕೆಗೆ ಜಿಲ್ಲಾಡಳಿತ ಸಮ್ಮತಿ

0
203
Tap to know MORE!

ಮಂಗಳೂರು: ಕೋವಿಡ್‌ ಕರ್ಫ್ಯೂವಿನಿಂದ ಸುಮಾರು 65 ದಿನಗಳ ಕಾಲ ಸಂಚಾರ ನಿಲ್ಲಿಸಿದ್ದ ಖಾಸಗಿ ಮತ್ತು ಸಿಟಿ ಬಸ್‌ ಸಂಚಾರ ಮಂಗಳೂರು ಜಿಲ್ಲೆಯಲ್ಲಿ ಜುಲೈ 1ರಿಂದ ಪುನಾರಂಭವಾಗಲಿದ್ದು, ಇದಕ್ಕೆ ಬಸ್‌ ಮಾಲೀಕರ ಸಂಘ ಸಕಲ ಸಿದ್ಧತೆ ಮಾಡಿಕೊಂಡಿದೆ.

ದಕ್ಷಿಣ ಕನ್ನಡ ಜಿಲ್ಲಾ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಮತ್ತು ಕೆನರಾ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ಅವರ ನೇತೃತ್ವದಲ್ಲಿ ಈಗಾಗಲೇ ಸಭೆ ನಡೆಸಿ ಜುಲೈ 1ರಿಂದ ಖಾಸಗಿ ಬಸ್‌ ಸಂಚಾರಕ್ಕೆ ನಿರ್ಧರಿಸಲಾಗಿದೆ. ಅದರಂತೆ ಜಿಲ್ಲಾಡಳಿತ ಸೂಚನೆಯನ್ನು ಪಾಲಿಸಿಕೊಂಡು ಖಾಸಗಿ ಬಸ್‌ ಸಂಚಾರ ಆರಂಭಗೊಳ್ಳಲಿದೆ.

ಜುಲೈ ಅಂತ್ಯದೊಳಗೆ ‘ಒಂದು ದೇಶ, ಒಂದು ಪಡಿತರ ಚೀಟಿ’ ದೇಶಾದ್ಯಂತ ಜಾರಿಗೊಳಿಸಲು ಸುಪ್ರೀಂ ಕೋರ್ಟ್ ಆದೇಶ

500ಕ್ಕೂ ಅಧಿಕ ಬಸ್‌ ರಸ್ತೆಗೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 24ರಿಂದ 200ಕ್ಕೂ ಅಧಿಕ ಕೆಎಸ್ಸಾರ್ಟಿಸಿ ಬಸ್‌ಗಳು ಪ್ರಯಾಣ ಆರಂಭಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1 ಸಾವಿರಕ್ಕೂ ಅಧಿಕ ಖಾಸಗಿ ಬಸ್‌ಗಳಿದ್ದು, ಜುಲೈ 1 ರಿಂದ 500ಕ್ಕೂ ಅಧಿಕ ಬಸ್‌ಗಳು ಪ್ರಯಾಣ ಆರಂಭಿಸಲಿವೆ ಎಂದು ಮಾಲೀಕರ ಸಂಘ ತಿಳಿಸಿದೆ. ಬಳಿಕ ಪ್ರಯಾಣಿಕರ ಪ್ರತಿಕ್ರಿಯೆ ಮತ್ತು ಜನರ ಸ್ಪಂದನೆ ನೋಡಿಕೊಂಡು ಬಸ್‌ಗಳನ್ನು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ದ.ಕ. ಬಸ್‌ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ತಿಳಿಸಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಬಸ್ ದರ ಏರಿಕೆ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್‌ ದರವನ್ನು ಏರಿಕೆ ಮಾಡಬೇಕೆಂಬ ಬೇಡಿಕೆಯನ್ನು ಬಸ್‌ ಮಾಲೀಕರ ಸಂಘ ಜಿಲ್ಲಾಡಳಿತ ಮುಂದಿರಿಸಿದ್ದು, ಇದಕ್ಕೆ ಜಿಲ್ಲಾಡಳಿತ ಗ್ರೀನ್‌ ಸಿಗ್ನಲ್‌ ನೀಡಿದೆ.

ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ವಿಜಯ ಕರ್ನಾಟಕ ಜತೆ ಮಾತನಾಡಿ, ಕೋವಿಡ್‌ ಮಾರ್ಗಸೂಚಿ ಪ್ರಕಾರ ಬಸ್‌ನಲ್ಲಿ ಶೇ.50ರಷ್ಟು ಪ್ರಯಾಣಿಕರನ್ನು ಮಾತ್ರ ಹಾಕಲು ಅವಕಾಶವಿದೆ. ಇದರಿಂದ ಬಸ್‌ ಮಾಲೀಕರಿಗೆ ಉದ್ಯಮ ನಡೆಸುವುದು ಕಷ್ಟ ಎಂದು ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಮಾರ್ಗಸೂಚಿ ಪಾಲನೆಯಿರುವ ತನಕ ಬಸ್‌ ದರ ಏರಿಕೆಗೆ ಸಹಮತ ಸೂಚಿಸಲಾಗಿದೆ. ಆ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪ್ರತಿನಿತ್ಯ ಏರಿಕೆ ಕಾಣುತ್ತಿರುವ ತೈಲ ಬೆಲೆ ಹಾಗೂ ಬಿಡಿ ಭಾಗಗಳ ದರ ಏರಿಕೆಯಿಂದ ಬಸ್‌ ಉದ್ಯಮವನ್ನು ನಡೆಸುವುದು ಕಷ್ಟವಾಗಿದೆ. 3 ತಿಂಗಳಿಗೊಮ್ಮೆ ಪ್ರತಿ ಬಸ್‌ಗೆ 40 ರಿಂದ 60 ಸಾವಿರ ತೆರಿಗೆ ಕಟ್ಟುತ್ತಿದ್ದೇವೆ. ನೆರೆ ಜಿಲ್ಲೆಗಳಲ್ಲೂ ಖಾಸಗಿ ಬಸ್ ದರ ಏರಿಕೆ ಮಾಡಿದ್ದು, ಸ್ಟೇಜ್‌ ಕ್ಯಾರಿಯೇಜ್‌ ಪ್ರಕಾರ ಶೇ.20ರಷ್ಟು ಏರಿಕೆ ಮಾಡಬೇಕು ಎಂದು ಬಸ್‌ ಮಾಲೀಕರು ಆಗ್ರಹ ವ್ಯಕ್ತಪಡಿಸಿದ್ದರು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಂಗಳವಾರ ನಡೆದ ಆರ್‌ಟಿಓ ಸಭೆಯಲ್ಲಿ ಇದಕ್ಕೆ ಸಹಮತ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here