ಮಂಗಳೂರು – ತಿರುವನಂತಪುರ ಎಕ್ಸ್ಪ್ರೆಸ್ ರೈಲಿನಲ್ಲಿ ಇಂದು ಬೆಳಗ್ಗೆ 7.45 ರ ಸುಮಾರಿಗೆ ಅಗ್ನಿ ಅನಾಹುತ ಉಂಟಾಗಿದೆ. ಪಾರ್ಸೆಲ್ ಬ್ಯಾಗಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಈ ಘಟನೆ ನಡೆದಿದೆ.
ರೈಲು ತಿರುವನಂತಪುರದ ವರ್ಕಳ ಎಂಬಲ್ಲಿಗೆ ತಲುಪಿತ್ತು. ಹೊಗೆಯನ್ನು ಗಮನಿಸಿದ ಪ್ರಯಾಣಿಕರು ಚೈನ್ ಎಳೆದು ರೈಲನ್ನು ನಿಲ್ಲಿಸಿ ಅಪಾಯವನ್ನು ತಪ್ಪಿಸಿದ್ದಾರೆ. ಬೆಂಕಿ ಹತ್ತಿಕೊಂಡ ಬೋಗಿಯನ್ನು ಬೇರ್ಪಡಿಸಿ, ಸುಲಭದಲ್ಲಿ ಬೆಂಕಿ ನಂದಿಸಲಾಯಿತು. ಅಗ್ನಿಶಾಮಕ ದಳದ ಜೊತೆಗೆ ಪ್ರಯಾಣಿಕರು, ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಿದರು. ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಅಪಾಯ ಉಂಟಾಗಿಲ್ಲ.