ಮಂಗಳೂರು ರ್‍ಯಾಗಿಂಗ್ ಪ್ರಕರಣ : ಎಲ್ಲಾ ವಿದ್ಯಾರ್ಥಿಗಳಿಗೆ ಷರತ್ತು ಬದ್ಧ ಜಾಮೀನು

0
65

ಮಂಗಳೂರು ಫೆ.13: ರ್‍ಯಾಗಿಂಗ್ ಆರೋಪದಲ್ಲಿ ಬಂಧನವಾದ ಮಂಗಳೂರಿನ ದೇರಳಕಟ್ಟೆ ಕಣಚೂರು ಕಾಲೇಜಿನ ಎಲ್ಲಾ 11 ವಿದ್ಯಾರ್ಥಿಗಳಿಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ‌.

ದೇರಳಕಟ್ಟೆ ಕಣಚೂರು ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ಕಾಲೇಜಿನ ಕಿರಿಯ ವಿದ್ಯಾರ್ಥಿಗಳಿಗೆ ರ್‍ಯಾಗಿಂಗ್ ನಡೆಸಿದ ಆರೋಪದಲ್ಲಿ 11 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದರು.

ಕಾಲೇಜ್‌ನ ಎರಡನೇ ವರ್ಷದ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ 18 ವಿದ್ಯಾರ್ಥಿಗಳು ಕೂದಲು ಗಡ್ಡ ಬೋಳಿಸುವಂತೆ, ತರಗತಿಗಳನ್ನು ಬೆಂಕಿ ಪೊಟ್ಟಣದಲ್ಲಿ ಅಳತೆ ಮಾಡುವಂತೆ ರ್‍ಯಾಗಿಂಗ್ ಮಾಡಿದ್ದಾರೆ ಎಂದು ಆರೋಪಿಸಿ ಕಾಲೇಜಿನ ಕ್ಯಾಂಪಸ್ ಆಫೀಸರ್ ಮಾರ್ಟಿನ್ ಜೋರ್ಜ್ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಮಂಗಳೂರು: ಮನೆಯಲ್ಲಿ ಬೈದರು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ೯ನೇ ತರಗತಿ ವಿದ್ಯಾರ್ಥಿ..!

ತನಿಖೆ ಕೈಗೊಂಡ ಪೊಲೀಸರು ವಿದ್ಯಾರ್ಥಿಗಳಾದ ಕೇರಳದ ಕ್ಯಾಲಿಕಟ್‌ನ ಪಾಳಿಯಾಡ್ ನಿವಾಸಿ ಮುಹಮ್ಮದ್ ಶಮ್ಮಾಸ್ (19), ಕೊಟ್ಟಾಯಂ ವೈಕ್ಯಂ ನಿವಾಸಿ ಅಕ್ಷಯ್ ಕೆ.ಎಸ್. (19), ಕೊಟ್ಟಾಯಂ ಅಯರ್ ಕುನ್ನ ರೋಬಿನ್ ಬಿಜು (20), ಕಾಸರಗೋಡು ಉಳ್ಳೂರಿನ ಅಬ್ದುಲ್ ಅನಸ್ (21), ಚಿಟ್ಟಾರಿಕಲ್ ಜೆಫಿನ್ ರೋಯಿಚನ್ (19), ಕೊಟ್ಟಾಯಂನ ಅಲ್ವಿನ್ ಜೋಯ್ (19), ಜೆರೋನ್ ಸಿರಿಲ್ (19), ಪತ್ತನಂತಿಟ್ಟ ನಿವಾಸಿ ಸೂರಜ್ (19), ಚೆಮ್ಮತ್ತೂರು ಆಸಿನ್ ಬಾಬು (19), ಮಲಪುರಂ ಜುಬಿನ್ ಮೆಹರೂಫ್ (21), ಅಬ್ದುಲ್ ಬಾಸಿತ್ (19) ಎಂಬುವವರನ್ನು ಬಂಧಿಸಿದ್ದರು.

ಬಂಧಿತ ವಿದ್ಯಾರ್ಥಿಗಳ ಪರ ವಕೀಲರಾದ ಮಹಮ್ಮದ್ ಅಸ್ಗರ್ ಮುಡಿಪು ಮತ್ತು ಆಸಿಫ್ ಬೈಕಾಡಿ ವಾದ ಮಂಡಿಸಿ ಒಂದೇ ದಿನದಲ್ಲಿ ಜಾಮೀನು ಸಿಗುವಂತೆ ಮಾಡಿದರು.

LEAVE A REPLY

Please enter your comment!
Please enter your name here