ಮಂಗಳೂರು: ಲಷ್ಕರ್ ಪರ ಗೋಡೆ ಬರಹ | ಓರ್ವ ಆರೋಪಿ ಬಂಧನ

0
133
Tap to know MORE!

ಮಂಗಳೂರು, ಡಿ.3: ಜಿಲ್ಲೆಯಲ್ಲಿ ಶಾಂತಿ ಕದಡುವಂತಹ ಹಾಗೂ ಕೋಮು ದ್ವೇಷಕ್ಕೆ ಕಾರಣವಾಗಬಲ್ಲ ಗೋಡೆ ಬರಹಗಳನ್ನು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನ್ನು ಮಂಗಳೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರು ನಗರದ ಎರಡು ಕಡೇ ಈ ರೀತಿಯ ದ್ವೇಷಪೂರಿತ ಗೋಡೆ ಬರಹಗಳು ಕಳೆದ ವಾರ ಕಂಡು ಬಂದಿತ್ತು.

ತೀರ್ಥಹಳ್ಳಿಯ ನಝೀರ್ ಮುಹಮ್ಮದ್ (26)ಬಂಧಿತ ಆರೋಪಿ . ಇಂದು ಮುಂಜಾನೆ ಕದ್ರಿ ಪೊಲೀಸರು ಆತನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈತ ನಗರದಲ್ಲಿ ಆನ್ ಲೈನ್ ಫುಡ್ ಡೆಲಿವರಿ ಕೆಲಸ ಮಾಡಿಕೊಂಡಿದ್ದ. ಮೊಬೈಲ್ ಲೊಕೇಶನ್ ಆಧಾರದಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಮಂಗಳೂರು : “ಪ್ರವಾದಿಗೆ ಕೋಪ ಬಂದರೆ ದೇಹದಿಂದ ತಲೆ ಬೇರ್ಪಡುವುದು” – ಬೆಳಕಿಗೆ ಬಂತು ಮತ್ತೊಂದು “ಉಗ್ರ” ಬರಹ

ಸಂಘಿಗಳನ್ನು ಹಾಗೂ ಮನುವಾದಿಗಳನ್ನು ನಿಯಂತ್ರಿಸಲು ಲಷ್ಕರ್ ಇ ತೊಯಿಬಾ ಮತ್ತು ತಾಲಿಬಾನ್ ಗಳನ್ನೂ ಕರೆಯುವಂತೆ ಪ್ರೆರೆಪಿಸಬೇಡಿ ಎಂದು ಬರೆದಿರುವ ಗೋಡೆ ಬರಹ ನ.27ರಂದು ಕದ್ರಿ‌ ಪೊಲೀಸ್ ಠಾಣೆ ಸಮೀಪದ ಬಿಜೈ ಬಳಿಯ ರಸ್ತೆಯ ಗೋಡೆಯೊಂದರಲ್ಲಿ ಬರೆಯಲಾಗಿತ್ತು.”ಮ ಅಲ್ಲದೆ ‘ಲಷ್ಕರ್ ಝಿಂದಾಬಾದ್’ ಎಂದೂ ಬರೆಯಲಾಗಿತ್ತು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಬಳಿಕ ನ.29ರಂದು ನಗರದ ಪಿವಿಎಸ್ ಸಮೀಪದ ನ್ಯಾಯಾಲಯದ ಆವರಣದ ಹಳೆ ಕಟ್ಟಡದ ಗೋಡೆಯ ಮೇಲೆ “Gustak e rasool ek hi saza tan say juda” ಎಂದು ಬರಹ ಪ್ರತ್ಯಕ್ಷವಾಗಿತ್ತು. ಪ್ರವಾದಿಯದು ಒಂದೇ ಶಿಕ್ಷೆ ,ದೇಹದಿಂದ ರುಂಡ ಬೇರ್ಪಡಿಸುವುದು ಎಂದು ಬರೆಯಲಾಗಿತ್ತು

LEAVE A REPLY

Please enter your comment!
Please enter your name here