ಮಂಗಳೂರು: ಯುಜಿಸಿ ಮಾರ್ಗಸೂಚಿಯಂತೆ ಇದೀಗ ದೇಶದಾದ್ಯಂತ ಬಹುತೇಕ ವಿವಿಗಳು ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಮುಂದಾಗಿವೆ. ಇದೀಗ ಮಂಗಳೂರು ವಿವಿಯೂ ಕೂಡ ಪರೀಕ್ಷೆಯ ಸಿದ್ದತೆಗಳ ಕುರಿತು ಪ್ರಕಟಣೆ ಬಿಡುಗಡೆ ಮಾಡಿದ್ದು, ಕೆಲವೇ ದಿನಗಳಲ್ಲಿ ಅಂತಿಮ ಪರೀಕ್ಷೆಯ ಪರೀಕ್ಷಾ ವೇಳಾಪಟ್ಟಿಯನ್ನು ಹೊರತರಲಿದೆ.
ಮಂಗಳೂರು ವಿವಿಯು ಅಂತಿಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ, ಪರೀಕ್ಷೆಯ ಮೊದಲು 10 ದಿನಗಳ ಕ್ರಾಶ್ ಕೋರ್ಸನ್ನು ನಡೆಸುವ ತೀರ್ಮಾನ ಮಾಡಿದೆ. ಈಗಾಗಲೇ ಆಗಿರುವ ಪಾಠಗಳ ಪುನರಾವರ್ತನೆಗೆ ಈ ಕೋರ್ಸ್ ಉಪಯುಕ್ತವಾಗಲಿದೆ ಎಂದು ಉಪಕುಲಪತಿ ಪ್ರೋ.ಪಿ.ಎಸ್ ಯಡಪಡಿತ್ತಾಯ ಹೇಳಿದರು.
ವಿವಿಯ ಅಧೀನದಲ್ಲಿ ಬರುವ ಎಲ್ಲಾ ಕಾಲೇಜುಗಳು ಪರೀಕ್ಷೆ ನಡೆಸಲು ಬೇಕಾಗುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು. ತರಗತಿ ಕೋಣೆಗಳನ್ನು ಸ್ಯಾನಿಟೈಸ್ ಮಾಡುವುದರಿಂದ ಹಿಡಿದು ವಿದ್ಯಾರ್ಥಿಗಳ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಎಚ್ಚರವಹಿಸಬೇಕು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಆಗಸ್ಟ್ 3 ರಿಂದ ಪ್ರಾಯೋಗಿಕ ಪರೀಕ್ಷೆ!
ಸದ್ಯಕ್ಕೆ ನಿಗದಿಯಾಗಿರುವಂತೆ, ಆಗಸ್ಟ್ 3 ರಿಂದ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗುವುದು. ಯಾವುದೇ ರೀತಿಯ ತೊಂದರೆಗೊಳಗಾಗದೆ, ಪರೀಕ್ಷಾರ್ಥಿಗಳ ನಡುವೆ ಸಾಮಾಜಿಕ ಅಂತರ ಇಟ್ಟು, ಏಕ ಕಾಲದಲ್ಲಿ ಅಲ್ಪ ಪ್ರಮಾಣದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಸುವಂತೆ ಕೇಳಲಾಗಿದೆ.
ಆಗಸ್ಟ್ 21ರಿಂದ ಲಿಖಿತ ಪರೀಕ್ಷೆ
ಲಿಖಿತ ಪರೀಕ್ಷೆಗೆ ತಾತ್ಕಾಲಿಕ ದಿನಾಂಕವನ್ನೂ ಸದ್ಯ ಪ್ರಕಟಿಸಿದ್ದು, ಆಗಸ್ಟ್ 21 ರಿಂದ ಸೆಪ್ಟೆಂಬರ್ 20ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಹೊರ ರಾಜ್ಯದವರಿಗೂ ಪರೀಕ್ಷೆ..!
ಹೊರ ರಾಜ್ಯದಿಂದ ಬಂದು ಮಂಗಳೂರು ವಿವಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಂಕಷ್ಟಕ್ಕೆ ವಿವಿಯು ಕ್ರಮ ಕೈಗೊಂಡಿದೆ. ತಮ್ಮ ಊರುಗಳಲ್ಲಿ ಇರುವ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆಯನ್ನು ಮಾಡಲಾಗುತ್ತದೆ ಎಂದು ನಿರ್ಧರಿಸಲಾಗಿದೆ.
No
No we r not ready for the exm
As many of the in contentment zone how can they attempt the exam.
is the government seriously concerned about students life or just concerned about the examination….
being a student im not ready for it.
No we are not ready
We are not ready for the exam