ಮಂಗಳೂರು ವಿವಿಯ ಸಂಯೋಜಿಕ ಕಾಲೇಜು ಬಂದ್ ವಿರೋಧಿಸಿ ಎಬಿವಿಪಿಯಿಂದ ಮನವಿ

0
122
Tap to know MORE!

ಮಂಗಳೂರು: ವಿಶ್ವವಿದ್ಯಾಲಯದ ಸಂಯೋಜಿಕ ಕಾಲೇಜುಗಳನ್ನು ಬಂದ್ ಮಾಡುತ್ತಿರುವ  ಕ್ರಮವನ್ನು ಖಂಡಿಸಿ, ವಿವಿ ಕುಲಪತಿಗಳಿಗೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಮನವಿ ಮಾಡಿದೆ.

ಮಂಗಳೂರು ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳಾಗಿರುವ ಮಂಗಳೂರು ವಿಶ್ವವಿದ್ಯಾಲಯ ಸಂಧ್ಯಾ ಕಾಲೇಜು ಮತ್ತು ಸರ್ಕಾರಿ ಮಂಗಳೂರು ವಿಶ್ವವಿದ್ಯಾಲಯ ಪ್ರಥಮ ದರ್ಜೆ ಕಾಲೇಜು , ನೆಲ್ಯಾಡಿ ಅವುಗಳನ್ನು ಬಂದ್ ಮಾಡುತ್ತಿರುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸಿದೆ.

ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುತ್ತಿರುವವರು ಬಹುತೇಕ ಗ್ರಾಮೀಣ ಭಾಗದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು , ಹೆಚ್ಚಿನ ಹಣವನ್ನು ಬರಿಸಲು ಆಗದೇ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳ ಮೇಲೆ ಅವಲಂಬಿತರಾಗಿದ್ದಾರೆ . ಸರ್ಕಾರಿ ಕಾಲೇಜುಗಳನ್ನು ಹೆಚ್ಚುಸುವಲ್ಲಿ ವಿಶ್ವವಿದ್ಯಾಲಯ ಕ್ರಮಗಳನ್ನು ಕೈಗೊಳ್ಳಬೇಕೆ ಹೊರತು ಬಂದ್ ಮಾಡಬಾರದು , ವಿಶ್ವವಿದ್ಯಾಲಯವು ಕೇವಲ ಆರ್ಥಿಕ ಹೊರೆಯ ನೆಪವನ್ನು ಮಾಡಿಕೊಂಡು ಬಂದ್ ಮಾಡುವುತ್ತಿರುವುದು ಖಂಡಿನೀಯ , ಆದ್ದರಿಂದ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಕೇವಲ ಆರ್ಥಿಕ ಹೊರೆಯನ್ನು ಪರಿಗಣಿಸದೆ ವಿಶ್ವವಿದ್ಯಾಲಯದಲ್ಲಿ ಕಲಿಯಲು ಬರುವ ಅನೇಕ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾಲೇಜುಗಳನ್ನು ಮುನ್ನಡಿಸಬೇಕೆಂದು ವಿದ್ಯಾರ್ಥಿ ಪರಿಷತ್ ಮನವಿ ಮಾಡಲಾಗಿದೆ .

ಅಲ್ಲದೇ ಪ್ರಸಕ್ತ ವರ್ಷದ ಪ್ರವೇಶಾತಿ ನಡೆಸಲು ತಕ್ಷಣವೇ ಅನುಮತಿಯನ್ನು ನೀಡಬೇಕೆಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯಲ್ಲಿ ವಿನಂತಿಸಿಕೊಳ್ಳಲಾಯಿತು ,  ಎಬಿವಿಪಿಯ ಮನವಿಯನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ . ಪಿ . ಎಸ್ ಯಡಪಡಿತ್ತಾಯಯ ಅವರಿಗೆ ನಿಯೋಗದ ಮೂಲಕ ಸಲ್ಲಿಸಲಾಯಿತು . ಈ ನಿಯೋಗದಲ್ಲಿ ಮಂಗಳೂರು ವಿಭಾಗ ಸಂಚಾಲಕರಾದ ಆಶಿಶ್ ಅಜ್ಜಿಬೆಟ್ಟು , ನೀಶಾನ್ ಆಳ್ವಾ , ಅಕ್ಷಯ ಕಾದಾಜೆ , ವಿಧಿತ್ , ವಿಧ್ಯಾರ್ಥಿನಿ ಧನ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here