ಮಂಗಳೂರು: ವಿವಿ ಕಾಲೇಜಿನ ಇನ್ನೊವೇಷನ್ ಕ್ಲಬ್ ವತಿಯಿಂದ ಕನ್ನಡ ಪತ್ರಿಕಾ ದಿನಾಚರಣೆ

0
412
Tap to know MORE!

ಮಂಗಳೂರು: ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಇನ್ನೊವೇಷನ್ ಕ್ಲಬ್ ವತಿಯಿಂದ “ಕನ್ನಡ ಪತ್ರಿಕಾ ದಿನ” ಆಚರಣೆಯ ಅಂಗವಾಗಿ “ಕನ್ನಡ ಪತ್ರಿಕೆಗಳ ಇತಿಹಾಸ ಮತ್ತು ಪದವಿ ವಿದ್ಯಾರ್ಥಿಗಳಿಗೆ ದಿನಪತ್ರಿಕೆಯ ಉಪಯೋಗಗಳು” ಎಂಬ ವಿಷಯದ ಕುರಿತು ಆನ್‌ಲೈನ್‌ ಸಂವಾದ ಹಮ್ಮಿಕೊಳ್ಳಲಾಗಿತ್ತು.

ಇನ್ನೋವೇಷನ್ ಸಂಘದ ಸಹನಿರ್ದೇಶಕ ಡಾ. ಸಿದ್ದರಾಜು ಎಂ.ಎನ್‌ ಮಾತನಾಡುತ್ತಾ, ದಿನ ಪತ್ರಿಕೆ ಎಂಬುದು ಸುದ್ದಿಯ ಜೊತೆಗೆ, ಸಾಹಿತ್ಯ, ವಿಜ್ಞಾನ, ಪದಬಂಧ, ಗಣಿತದ ಸುಡೊಕು, ಸಿನಿಮಾ ರಂಜನೆ ಎಲ್ಲವನ್ನೂ ನೀಡುವ ಅದ್ಭುತ ಮಾಹಿತಿಯ ಕಣಜ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕಾದರೆ ದಿನ ಪತ್ರಿಕೆ ಓದುವುದು ಅನಿವಾರ್ಯ, ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿ ಲಸಿಕಾ ಅಭಿಯಾನ: ಮಂಗಳೂರು ವಿವಿ ಕಾಲೇಜಿನ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೋವಿಡ್‌ ಲಸಿಕೆ

ನಿಮ್ಮ ಊರಿನ, ಸ್ಥಳೀಯ ಸುದ್ದಿಗಳನ್ನು ಸುದ್ದಿವಾಣಿಯಲ್ಲಿ ಪ್ರಕಟಿಸಲಾಗುವುದು. ಆದ ಜನ ಸ್ನೇಹಿ ಕಾರ್ಯಕ್ರಮಗಳ ವರದಿಯನ್ನು suddivani20@gmail.com ಗೆ mail ಮಾಡಿ

ಸಂವಾದದಲ್ಲಿ ಪಾಲ್ಗೊಂಡ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಗುರುಪ್ರಸಾದ್, ಜರ್ಮನ್‌ ಕ್ರೈಸ್ತ ಧರ್ಮ ಪ್ರಚಾರಕ ಹರ್ಮನ್‌ ಮೋಗ್ಲಿಂಗ್‌ ಅವರು ಹಲವು ಅಡ್ಡಿಗಳ ನಡುವೆಯೂ ಮೊದಲ ಕನ್ನಡ ಪತ್ರಿಕೆ ಆರಂಭಿಸಿದ್ದಲ್ಲದೆ, ಕನ್ನಡ ಸಾಹಿತ್ಯಕ್ಕೂ ಅಪಾರ ಕೊಡುಗೆ ನೀಡಿದ್ದಾರೆ, ಎಂದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ವಿದ್ಯಾರ್ಥಿನಿಯರಾದ ಚೈತಾಲಿ ಪತ್ರಿಕೆಯ ಇತಿಹಾಸ ಮತ್ತು ಬೆಳವಣಿಗೆ ಬಗ್ಗೆ ವಿಷಯ ಮಂಡಿಸಿದರು. ಗೌಸಿಯಾ ಕಾರ್ಯಕ್ರಮ ನಿರೂಪಿಸಿದರೆ, ಮೆಲ್ರಿನ್ ಸ್ವಾಗತಿಸಿ, ಶ್ರುತಿ ವಂದಿಸಿದರು.

LEAVE A REPLY

Please enter your comment!
Please enter your name here