ಮಂಗಳೂರು ವಿವಿ ಕುಲಸಚಿವರಾಗಿ ಡಾ. ಕಿಶೋರ್‌ ಕುಮಾರ್‌ ಸಿ.ಕೆ ಅಧಿಕಾರ ಸ್ವೀಕಾರ

0
401
Tap to know MORE!

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಕಿಶೋರ್‌ ಕುಮಾರ್‌ ಸಿಕೆ (ಎಂ.ಪಿ.ಎಡ್‌, ಪಿ.ಹೆಚ್‌.ಡಿ) ಅವರು ನೂತನ ಕುಲಸಚಿವರಾಗಿ (ಆಡಳಿತ) ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ (ಉನ್ನತ ಶಿಕ್ಷಣ ಇಲಾಖೆ) ಮಹೇಶ್‌ ಆರ್‌ ಹೊರಡಿಸಿದ ಆದೇಶಾನುಸಾರ, ಮಾರ್ಚ್‌ 22 ರಿಂದ ಕೆ. ರಾಜು ಮೊಗವೀರ (ಕೆ.ಎ.ಎಸ್‌) ಅವರ ವರ್ಗಾವಣೆಯ ಬಳಿಕ ಉಸ್ತುವಾರಿ ಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ ಎಲ್‌ ಧರ್ಮ ಅವರು ಅಧಿಕಾರ ಹಸ್ತಾಂತರಿಸಿದರು. ಸುಮಾರು ಮೂರು ದಶಕಗಳ ಬೋಧನೆ/ಆಡಳಿತ ಅನುಭವವಿರುವ ಡಾ. ಕಿಶೋರ್‌ ಕುಮಾರ್‌ ಸಿಕೆ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ (ಉಸ್ತುವಾರಿ), ಸಿಂಡಿಕೇಟ್‌ ಸದಸ್ಯ, ಅಕಾಡೆಮಿಕ್‌ ಕೌನ್ಸಿಲ್‌ ಸದಸ್ಯ, ಡೀನ್‌ (ಶಿಕ್ಷಣ) ಮೊದಲಾದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.
ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here