ಮಂಗಳೂರು ವಿವಿ: ಮೇ 10 ರಿಂದ ಮುಂದಿನ ಸೆಮಿಸ್ಟರ್ ಆನ್ಲೈನ್ ತರಗತಿ ಆರಂಭಿಸಲು ಆದೇಶ

0
374
Tap to know MORE!

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಸಂಯೋಜಿತ/ಸ್ವಾಯತ್ತ/ಘಟಕ ಕಾಲೇಜುಗಳಲ್ಲಿ 2020-21ನೇ ಸಾಲಿನ ಸ್ನಾತಕ ಕಾರ್ಯಕ್ರಮಗಳ ದ್ವಿತೀಯ, ಚತುರ್ಥ ಮತ್ತು ಆರನೇ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಮೇ 10 (ಸೋಮವಾರ) ರಿಂದ ಆನ್‌ಲೈನ್‌ ತರಗತಿಗಳನ್ನು ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಮಂಗಳವಾರ ನಡೆದ ಪ್ರಾಂಶುಪಾಲರುಗಳ ಆನ್‌ಲೈನ್‌ ಸಭೆಯಲ್ಲಿ ಎಲ್ಲರ ಅಭಿಪ್ರಾಯದಂತೆ ಈ ತೀರ್ಮಾನಕ್ಕೆ ಬರಲಾಗಿದೆ. ಉಳಿದಿರುವ ಪ್ರಥಮ, ತೃತೀಯ ಮತ್ತು ಪಂಚಮ ಸೆಮಿಸ್ಟರ್‌ ಪರೀಕ್ಷೆಗಳು ಮತ್ತು ಭೌತಿಕ ತರಗತಿಗಳ ದಿನಾಂಕಗಳನ್ನು ಸರ್ಕಾರದ ಅನುಮತಿಯ ಬಳಿಕ ಪ್ರಕಟಿಸಲು ಸಭೆ ತೀರ್ಮಾನಿಸಿದೆ.

LEAVE A REPLY

Please enter your comment!
Please enter your name here