ಮಂಗಳೂರು ವಿವಿ : ಮುಂದೂಡಲಾಗಿದ್ದ ಸೆ.28 ರ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ

0
550
Tap to know MORE!

ಮಂಗಳೂರು: ಕಾರಣಾಂತರಗಳಿಂದ ಸೆ.28ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿದ್ದ ಮಂಗಳೂರು ವಿಶ್ವವಿದ್ಯಾಲಯ, ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಂತೆ, ಮುಂದೂಡಲಾಗಿದ್ದ ಎಲ್ಲಾ ವಿಷಯಗಳ ಪರೀಕ್ಷೆಗೆ ನೂತನ ದಿನಾಂಕವನ್ನು ಪ್ರಕಟಿಸಿದೆ. ಅದೇ ರೀತಿ, ಸೆ.15 ರಂದು ನಿಗದಿಯಾಗಿದ್ದ ಬಿಬಿಎ/ಬಿಬಿಎಂ ಪರೀಕ್ಷೆಗಳ ಪರಿಷ್ಕೃತ ದಿನಾಂಕವನ್ನೂ ಪ್ರಕಟಿಸಲಾಗಿದೆ.

ಈ ಕೆಳಗಿನಂತೆ ದಿನಾಂಕವನ್ನು ಪುನಃ ಬದಲಾವಣೆ ಮಾಡಿ ಮರುಪರಿಷ್ಕರಿಸಲಾಗಿದೆ.

ಪಿಡಿಎಫ್ ಕಾಪಿಯನ್ನು ಇಲ್ಲಿ ನೋಡಿ : 28-09-2020ರ ಪರೀಕ್ಷೆ  ಮತ್ತು 21-09-2020ರ ಪರೀಕ್ಷೆ

ಅದೇ ರೀತಿ, ಭಾರಿ ಮಳೆಯಿಂದಾಗಿ ದಿನಾಂಕ 21 ಸೆಪ್ಟೆಂಬರ್‌ನಂದು ನಡೆಯಬೇಕಿದ್ದ ಪರೀಕ್ಷೆಗಳ ಪರಿಷ್ಕೃತ ದಿನಾಂಕವನ್ನೂ ಮಂಗಳೂರು ವಿಶ್ವವಿದ್ಯಾನಿಲಯ ಪ್ರಕಟಿಸಿದೆ.

ಉಳಿದಂತೆ ಈ ಹಿಂದೆ ಪ್ರಕಟಿಸಿದ ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪರೀಕ್ಷಾಂಗ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here