ಲಾಕ್ಡೌನ್ ಸಡಿಲಿಕೆಗೊಂಡ 25 ನೇ ದಿನದಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 90 ಹೊಸ ಕೊರೋನಾ ಪ್ರಕರಣಗಳು ಮತ್ತು ಒಂದು ಸಾವು ವರದಿಯಾಗಿದೆ.
ಜಿಲ್ಲೆಯಲ್ಲಿ ಗುರುವಾರ ಒಟ್ಟು 113 ಮಂದಿ ಸೇರಿದಂತೆ, ಇದುವರೆಗೆ ಒಟ್ಟು 47,696 ಜನರನ್ನು ಪರೀಕ್ಷಿಸಲಾಗಿದೆ. ಇಂದು ಪರೀಕ್ಷೆಗಾಗಿ 293 ಮಾದರಿಗಳನ್ನು ಕಳುಹಿಸಲಾಗಿದೆ. 130 ಮಾದರಿಗಳ ವರದಿಗಳು ಗುರುವಾರ ಸ್ವೀಕರಿಸಲ್ಪಟ್ಟವು. ಅದರಲ್ಲಿ 90 ಮಂದಿಯಲ್ಲಿ ಕೊರೋನಾ ದೃಢಪಟ್ಟಿದೆ. 427 ಮಾದರಿಗಳ ವರದಿಗಳು ಇನ್ನೂ ಬರಲಿದೆ.
ಜಿಲ್ಲಾ ಆರೋಗ್ಯ ಬುಲೆಟಿನ್ ಪ್ರಕಾರ, ಒಟ್ಟು 14,430 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷೆಗಳಿಗೆ ಕಳುಹಿಸಲಾಗಿದೆ. ಅದರಲ್ಲಿ 923ಜನರ ವರದಿಗಳು ಪಾಸಿಟಿವ್ ಎಂದು ಬಂದಿದೆ., ಇದರಲ್ಲಿ ಇತರ ಜಿಲ್ಲೆಗಳ 10 ವ್ಯಕ್ತಿಗಳು ಸೇರಿದ್ದಾರೆ. ಈ ಪೈಕಿ 428 ಪ್ರಕರಣಗಳು ಸಕ್ರಿಯವಾಗಿವೆ. ಇದರ ಮಧ್ಯೆ ಇಂದು 33 ಮಂದಿ ಸೇರಿದಂತೆ ಒಟ್ಟು 477 ಜನರು ಚೇತರಿಸಿ ಬಿಡುಗಡೆಯಾಗಿದ್ದಾರೆ ಮತ್ತು ಗುರುವಾರ ಒಬ್ಬರು ಸೇರಿದಂತೆ, ಇದುವರೆಗೆ 18 ಸಾವುಗಳು ಸಂಭವಿಸಿವೆ.