ಮಂಗಳೂರು : ವಿಮಾನ ನಿಲ್ದಾಣದಲ್ಲಿ ಅಂದಾಜು ₹32 ಲಕ್ಷ ಮೌಲ್ಯದ ಅಕ್ರಮ ಚಿನ್ನ ವಶ | ಸಾಗಾಟ ಮಾಡುತ್ತಿದ್ದವನ ಬಂಧನ

0
62
ಮಂಗಳೂರು, ಚಿನ್ನ, ಸುದ್ದಿವಾಣಿ,
ವಶಪಡಿಸಿಕೊಳ್ಳಲಾಗಿರುವ ಚಿನ್ನ

ಮಂಗಳೂರು: ದುಬೈನಿಂದ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕ ಅಕ್ರಮ ಸಾಗಾಟಕ್ಕೆ ಯತ್ನಿಸಿದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮಂಗಳೂರಿನ ಅಬೂಬಕರ್ ಸಿದ್ದೀಕ್ ಬಂಧಿತ ಎಂದು ತಿಳಿದುಬಂದಿದೆ.

ಈತ ದುಬೈನಿಂದ ಸ್ಪೈಸ್‌ಜೆಟ್ ವಿಮಾನದ ಮೂಲಕ ಮಂಗಳೂರಿಗೆ ಬಂದಿಳಿದಿದ್ದಾನೆ. ತಪಾಸಣೆ ನಡೆಸುವ ವೇಳೆ 24 ಕ್ಯಾರೆಟ್‌ನ 634 ಗ್ರಾಂ ಚಿನ್ನ ಪತ್ತೆಯಾಗಿದೆ. ಇದರ ಮೌಲ್ಯ ₹32,96,800 ರೂ. ಎಂದು ಅಂದಾಜಿಸಲಾಗಿದೆ.

ಆರೋಪಿಯು ಪೌಡರ್ ರೂಪದ ಚಿನ್ನವನ್ನು ದೇಹಕ್ಕೆ ಅಂಟಿಸಿಕೊಂಡು ಅಕ್ರಮ ಸಾಗಾಟಕ್ಕೆ‌ ಮುಂದಾಗಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here