ಮಂಗಳೂರು: ಕಾಸರಗೋಡಿನ ಮಂಜೇಶ್ವರ ತಾಲೂಕಿನ ಬಾಯಾರು ಕನ್ಯಾಲ ಎಂಬಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ಕೊಲೆ ಆರೋಪಿಯನ್ನು ಸುದಂಬಲದ ಉದಯ (40) ಎಂದು ಗುರುತಿಸಲಾಗಿದ್ದು, ಈತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೊಲೆಗೀಡಾದವರನ್ನು ಆರೋಪಿ ಉದಯನ ಸಹೋದರ ಮಾವಂದಿರಾದ ಸದಾಶಿವ (54), ವಿಠಲ (52), ಬಾಬು (50) ಮತ್ತುು ಚಿಕ್ಕಮ್ಮ ರೇವತಿ (58) ಎಂದು ತಿಳಿದು ಬಂದಿದೆ. ಕುಟುಂಬ ಕಲಹದಲ್ಲಿ ಉಂಟಾದ ವಾಗ್ವಾದವೇ ಕೊಲೆಗೆ ಕಾರಣ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಆರೋಪಿ ಮಾನಸಿಕ ಅಸ್ವಸ್ಥ ಎಂದು ಸಮೀಪ ವಾಸಿಗಳು ಹಾಗೂ ಕುಟುಂಬಸ್ಥರು ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಕಾಸರಗೋಡು ಡಿ.ವೈ.ಎಸ್.ಪಿ ಬಾಲಕೃಷ್ಣನ್ ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
(ಪಬ್ಲಿಕ್ ನೆಕ್ಸ್ಟ್ ವರದಿ)