ಭಾರೀ ಕುತೂಹಲ ಮೂಡಿಸಿದ ಮಂಜೇಶ್ವರ ವಿಧಾನಸಭೆಯಲ್ಲಿ ಯುಡಿಎಫ್‌ಗೆ ಗೆಲುವು | ಕೆ.ಸುರೇಂದ್ರನ್‌ಗೆ ಮತ್ತೊಮ್ಮೆ ಸೋಲು

0
145
Tap to know MORE!

ಕಾಸರಗೋಡು : ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಕುತೂಹಲ ಕೆರಳಿಸಿದ ಮಂಜೇಶ್ವರದಲ್ಲಿ ಯುಡಿಎಫ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಮಂಜೇಶ್ವರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಭಾರಿ ನಿರೀಕ್ಷೆ ಇತ್ತು. ಬಿಜೆಪಿ ಅಭ್ಯರ್ಥಿ ಯಾಗಿದ್ದ ಸುರೇಂದ್ರನ್ 2016ರಲ್ಲಿ ಲೀಗ್ ಅಭ್ಯರ್ಥಿ ಅಬ್ದುಲ್ ರಝಾಕ್ ಅವರಿಂದ 87 ಮತಗಳಿಂದ ಸೋಲು ಕಂಡಿದ್ದರು. ರಝಾಕ್ ನಿಧನದ ಬಳಿಕ ನಡೆದ ಉಪಚುನಾವಣೆಯಲ್ಲಿ ಕುಂಟಾರು ರವೀಶ್ ತಂತ್ರಿ 5 ಸಾವಿರ ಮತಗಳ ಅಂತರದಿಂದ ಸೋಲನ್ನಪ್ಪಿದ್ದರು. ಈ ಬಾರಿ ಸುರೇಂದ್ರನ್ ಮತ್ತೆ ಸ್ಪರ್ಧಿಸಿ ಕುತೂಹಲ ಮೂಡಿಸಿದ್ದರು.

ಪ್ರತಿ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಮತ್ತು ಲೀಗ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆದಿದ್ದು ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಸೋಲನ್ನಪ್ಪಿದ್ದಾರೆ. ಲೀಗ್ ಅಭ್ಯರ್ಥಿ ಎ ಕೆ ಎಂ ಅಶ್ರಫ್ ಗೆಲುವು ಸಾಧಿಸಿದ್ದಾರೆ. ರಾಜ್ಯದಲ್ಲಿ ಅಧಿಕಾರ ಪಡೆದಿರುವ ಸಿಪಿಎಂ ಮೂರನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಭಾರತಕ್ಕೆ ವೆಂಟಿಲೇಟರ್, ಆಕ್ಸಿಜನ್ ಕಂಟೇನರ್ ಸೇರಿದಂತೆ ಇನ್ನಿತರ ವೈದ್ಯಕೀಯ ಸಲಕರಣೆಗಳನ್ನು ಒದಗಿಸುವುದಾಗಿ ಫ್ರಾನ್ಸ್ ಘೋಷಣೆ!

ಮಂಜೇಶ್ವರ ಕ್ಷೇತ್ರ ಗೆಲ್ಲಲು ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಭಾರಿ ಪ್ಲಾನ್ ಗಳನ್ನು ಮಾಡಿತ್ತು. ಸ್ವತಃ ಅಮಿತ್ ಶಾ ಅವರೆ ಮಂಜೇಶ್ವರ ಸ್ಥಾನ ಗೆಲ್ಲಲು ಪ್ಲಾನ್ ಮಾಡಿದ್ದರು. ಕರ್ನಾಟಕದ ಸಚಿವರು, ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಆದರೂ ಈ ಬಾರಿಯು ಬಿಜೆಪಿಗೆ ಸೋಲಾಗಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here