ಉಪ್ಪಳ: ನಲಿಕೆಯವರ ಸಮಾಜ ಸೇವಾ ಸಂಘ ಮಂಜೇಶ್ವರ ವಲಯದ ಸಭೆ ಭಾನುವಾರ ಜಗದೀಶ್ ಮಂಗಲ್ಪಾಡಿಯವರ “ಲಕ್ಷ್ಮಿ ನಿವಾಸ”ದಲ್ಲಿ ನಡೆಯಿತು. ವಲಯ ಅಧ್ಯಕ್ಷರಾದಂತಹ “ಕೃಷ್ಣ ಸೋಮೇಶ್ವರ” ಅಧ್ಯಕ್ಷತೆ ವಹಿಸಿ,ಜಗತ್ತಿಗೆ ಆವರಿಸಿಕೊಂಡಿರುವ ಮಹಾಮಾರಿ “ಕೊರೊನಾ”ದ ಈ ಸಂದರ್ಭದಲ್ಲಿ ನಮ್ಮ ಸಂಘಟನೆಯನ್ನು ಯಾವೆಲ್ಲ ರೀತಿಯಲ್ಲಿ ಆರೋಗ್ಯಪೂರ್ಣವಾಗಿ ಮುಂದುವರಿಸಬಹುದೆಂದು ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು.
ಈ ಸಂದರ್ಭ, ಇತ್ತೀಚೆಗೆ ನಿಧನರಾದ ಡಾ/ ಶಶಿಕಾಂತಮಣಿ ಸ್ವಾಮೀಜಿ,ಜಯಂತಿ ಕಳಂಜಡ್ಕ, ಲಲಿತ, ತನಿಯಪ್ಪ ಮರಿಕಾಪು ವರ್ಕಾಡಿ, ಸುಂದರಿ ಮುಕಾರಿಕಂಡ ಇವರ ಆತ್ಮಕ್ಕೆ ಚಿರಶಾಂತಿ ದೊರಕಲು ಮೌನ ಪ್ರಾರ್ಥನೆಯನ್ನು ಮಾಡಲಾಯಿತು.
ಇದನ್ನೂ ನೋಡಿ: ಮಂಜೇಶ್ವರ : ಒಂದೇ ಮನೆಯ ನಾಲ್ವರ ಕೊಲೆ – ಆರೋಪಿ ಬಂಧನ
ನೂತನ ಕಟ್ಟಡ ಸಮಿತಿಯ ಅಧ್ಯಕ್ಷರಾದಂತಹ ಗೋಪಾಲಕೃಷ್ಣ ಕುಡಾಲ್, ಹಿರಿಯ ಸಲಹೆಗಾರಗಾದ ಯಕ್ಷಗುರು ರಾಮ ಸಾಲಿಯಾನ್ ಮಂಗಲ್ಪಾಡಿ, ದೈವಾರಾದನಾ ಸಮಿತಿಯ ಅಧ್ಯಕ್ಷರಾದಂತಹ ರಾಮ ಪ್ರಸಾದ್ ಖಂಡಿಗೆ,ಕ್ರೀಡಾ ಕಾರ್ಯದರ್ಶಿ ಶಿವಕುಮಾರ್ ಅಗರ್ತಿಮೂಲೆ ಉಪಸ್ಥಿತರಿದ್ದರು.
ವಲಯದ ಕಾರ್ಯದರ್ಶಿ, ಯುವ ಬರಹಗಾರ ಸುಜಿತ್ ಕುಮಾರ್ ಪ್ರಾರ್ಥನೆ ಹಾಡಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಲಯದ ಕೋಶಾಧಿಕಾರಿ ಹರೀಶ್ ಮಂಗಲ್ಪಾಡಿ ಸ್ವಾಗತಿಸಿ, ವಂದಿಸಿದರು.