ವಂಚನೆ ಪ್ರಕರಣ: ಮಂಜೇಶ್ವರ ಶಾಸಕ ಎಂ. ಸಿ ಕಮರುದ್ದೀನ್ ಗೆ ನ್ಯಾಯಾಂಗ ಬಂಧನ!

0
193
Tap to know MORE!

ಮಂಜೇಶ್ವರ: ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿರುವ ಮಂಜೇಶ್ವರ ಶಾಸಕ ಎಂ. ಸಿ ಕಮರುದ್ದೀನ್ ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಮರುದ್ದೀನ್ ಅವರನ್ನು ಕಾಞoಗಾಡ್ ಮೆಜಿಸ್ಟ್ರೇಟ್ ಮುಂಭಾಗದಲ್ಲಿ ಹಾಜರುಪಡಿಸಲಾಯಿತು.

ಈ ನಡುವೆ ಜಾಮೀನು ಕೋರಿ ಕಮರುದ್ದೀನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೋಮವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.ಫ್ಯಾಷನ್ ಗೋಲ್ಡ್ ಜುವೆಲ್ಲರಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶನಿವಾರ ಸಂಜೆ ಕಮರುದ್ದೀನ್ ನನ್ನು ಕ್ರೈಂ ಬ್ರಾಂಚ್ ಬಂಧಿಸಿತ್ತು. ಬೆಳಿಗ್ಗೆ ವಿಚಾರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಕರೆಸಿದ್ದ ಕ್ರೈಂ ಬ್ರಾಂಚ್ ಪೊಲೀಸ್ರು ವಿಚಾರಣೆ ಬಳಿಕ ಬಂಧಿಸಿ ಮೆಜಿಸ್ಟ್ರೇಟ್ ಮುಂಭಾಗ ಹಾಜರು ಪಡಿಸಿದ್ದರು.500 ರಷ್ಟು ಠೇವಣಿ ದಾರರಿಂದ ಸುಮಾರು 150 ಕೋಟಿ ರೂ .ಗಳಷ್ಟು ವಂಚನೆ ನಡೆದಿದ್ದು, 115 ದೂರುಗಳು ಈಗಾಗಲೇ ಲಭಿಸಿದೆ.

LEAVE A REPLY

Please enter your comment!
Please enter your name here