ಮಗನಿಗೆ ಆನ್ಲೈನ್ ತರಗತಿ – ಸ್ಮಾರ್ಟ್ ಫೋನ್ ಕೊಳ್ಳಲು ಮನಗೆ ಆಧಾರವಾಗಿದ್ದ ಹಸುವನ್ನೇ ಮಾರಿದ ಪೋಷಕರು

0
291
Tap to know MORE!

ಕೊರೊನಾ ಭೀತಿಯಿಂದ ಎಲ್ಲಾ ಕಡೆ ಶಾಲೆಗಳು ಬಂದ್ ಆಗಿವೆ. ಇದರಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೂ ಹೊಡೆತ ಬಿದ್ದಿದೆ. ತರಗತಿಗಳನ್ನು ಸರಿದೂಗಿಸಲು, ಹಲವು ಸರ್ಕಾರಗಳು ಆನ್ ಲೈನ್ ಕ್ಲಾಸ್ ಕಡೆಗೆ ಮುಖ ಮಾಡಿವೆ.

ಮಕ್ಕಳ ಶಿಕ್ಷಣದ ಎದುರು ತೊಂದರೆ, ಕಷ್ಟ ಅನುಭವಿಸಿದರೂ ಪರವಾಗಿಲ್ಲ ಅನ್ನೋ ಚಿಂತನೆಯುಳ್ಳ ಇಂತಹ ಪೋಷಕರನ್ನೂ ಕಾಣಬಹುದು. ಕಷ್ಟ ಪಟ್ಟು, ಆರ್ಥಿಕ ತೊಂದರೆಯಿದ್ದರೂ ಮಗನ ಶಿಕ್ಷಣಕ್ಕಾಗಿ ತಂದೆಯೊಬ್ಬರು ಹಸುವನ್ನೇ ಮಾರಿ, ಸ್ಮಾರ್ಟ್ ಫೋನ್ ಖರೀದಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲೂ ಆನ್ಲೈನ್ ತರಗತಿಗಳನ್ನು ನಡೆಸುವಂತೆ ಸರ್ಕಾರ ಆದೇಶಿಸಿದೆ‌. ಇದೇ ಕಾರಣಕ್ಕೆ, ಪಾಲಂಪುರ ಜಿಲ್ಲೆಯಲ್ಲಿ ಮಗನ ಆನ್ಲೈನ್ ಕ್ಲಾಸ್ ಗಾಗಿ ಪಾಲಕರು ಮನೆಯಲ್ಲಿದ್ದ ಹಸುವನ್ನು ಮಾರಿದ್ದಾರೆ. ಅವ್ರ ಜೀವನಕ್ಕೆ ಇದೇ ಆಧಾರವಾಗಿತ್ತು. ಆದ್ರೆ ಇದನ್ನು ಮಾರಾಟ ಮಾಡಿದ್ದಕ್ಕೆ ಅವರಿಗೆ ಸಿಕ್ಕಿದ್ದು ಕೇವಲ 6 ಸಾವಿರ ! ಅದ್ರಲ್ಲಿಯೇ ಮೊಬೈಲ್ ಖರೀದಿ ಮಾಡಿ, ಮಗನಿಗೆ ಶಿಕ್ಷಣ ನೀಡಲು ಮುಂದಾಗಿದ್ದಾರೆ.

ಕುಲ್ದೀಪ್ ಎಂಬುವವರಿಗೆ ಇಬ್ಬರು ಮಕ್ಕಳು. ಮಗ 4ನೇ ಕ್ಲಾಸ್ ನಲ್ಲಿ ಓದುತ್ತಿದ್ದಾನೆ. ಮಗನ ಆನ್ಲೈನ್ ಕ್ಲಾಸ್ ಶುರುವಾಗ್ತಿದ್ದಂತೆ ಶಾಲೆಯಲ್ಲಿ ಸ್ಮಾರ್ಟ್ಫೋನ್ ಖರೀದಿಗೆ ಒತ್ತಡ ಹೆಚ್ಚಾಗಿತ್ತಂತೆ. 500 ರೂಪಾಯಿ ಕೈನಲ್ಲಿರದ ಸಮಯದಲ್ಲಿ ಕುಲ್ದೀಪ್ ಅನೇಕರ ಬಳಿ ಹಣ ಸಾಲ ಕೇಳಿದ್ದಾನೆ. ಆದ್ರೆ ಯಾರೂ ಹಣ ನೀಡದ ಕಾರಣ ಹಸುವನ್ನೇ ಮಾರಾಟ ಮಾಡಿದ್ದಾನೆ. ಆದ್ರೀಗ ಮುಂದಿನ ಜೀವನ ಹೇಗೆ ಎಂಬ ಚಿಂತೆ ಶುರುವಾಗಿದೆ. ಏನೇ ಇರಲಿ ಬಡತನದಲ್ಲಿಯೂ ಮಕ್ಕಳ ಶಿಕ್ಷಣಕ್ಕಾಗಿ ಹಸು ಮಾರಿದ ಪೋಷಕರ ನಡೆ ಮಾದರಿ.

ಭಾರತದಂತಹ ರಾಷ್ಟ್ರಗಳಲ್ಲಿ ಸಂಪೂರ್ಣ ಆನ್ಲೈನ್ ತರಗತಿಗಳು ಕಷ್ಟಸಾಧ್ಯ. ಪ್ರಮುಖವಾಗಿ ಗ್ರಾಮೀಣ ಭಾಗಗಳಲ್ಲಿ ಆನ್ ಲೈನ್ ಕ್ಲಾಸ್ ಗೆ ಬೇಕಾದ ಸೌಲಭ್ಯ ಇದೆಯಾ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಆನ್ ಲೈನ್ ತರಗತಿಗೆ ನೆಟ್ ವರ್ಕ್, ಅಷ್ಟೇ ಅಲ್ಲ, ಸ್ಮಾರ್ಟ್ ಫೋನ್ ಅಥವಾ ಯಾವುದೇ ಡಿವೈಸ್ ಗಳನ್ನು ಬಳಸುವುದರ ಬಗ್ಗೆ ಪೋಷಕರಿಗೆ ತಿಳಿದಿದೆಯಾ..? ಅದಕ್ಕಿಂತ ಆನ್ಲೈನ್ ತರಗತಿಗಳು ಎಷ್ಟರ ಮಟ್ಟಿಗೆ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತವೆ ಎಂಬುದು ಮುಖ್ಯವಾಗುತ್ತದೆ.

LEAVE A REPLY

Please enter your comment!
Please enter your name here