ಗುಂಡ್ಲುಪೇಟೆ: ಎರಡನೇ ಹೆಂಡತಿಗೆ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ತನ್ನ ಮೊದಲ ಪತ್ನಿಯಲ್ಲಿ ತನಗೆ ಜನಿಸಿದ ಸ್ವಂತ ಮಗಳನ್ನೇ ಕೊಲೆ ಮಾಡಿರುವ ಅಮಾನವೀಯ ಘಟನೆ ವರದಿಯಾಗಿದೆ.
ಸೋಮಹಳ್ಳಿ ಗ್ರಾಮದ ಮಹೇಶ ತನ್ನ ಮೊದಲನೇ ಹೆಂಡತಿ ಗೌರಮ್ಮಳಿಗೂ ಎದುರು ಮನೆಯ ಮಹದೇವಸ್ವಾಮಿ ಎಂಬಾತನಿಗೂ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಿ ಕಳೆದ ಆರು ವರ್ಷಗಳ ಹಿಂದೆಯೇ ಊರಿನ ಮುಖಂಡರ ಸಮ್ಮುಖದಲ್ಲಿ ನ್ಯಾಯಪಂಚಾಯಿತಿ ನಡೆಸಿ ಆಕೆಯಿಂದ ದೂರವಾಗಿದ್ದ.
ಇದನ್ನೂ ನೋಡಿ : ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ
ನಂತರ ಮಹೇಶ ರತ್ನಮ್ಮ ಎಂಬಾಕೆಯನ್ನು ಮದುವೆಯಾಗಿದ್ದರೂ ಇವರಿಗೆ ಮಕ್ಕಳಾಗಿರಳಿಲ್ಲ. ಈ ನಡುವೆ ಈ ದಂಪತಿ ಸೋಮವಾರ ಗೌರಮ್ಮಳ ಪುಟ್ಟ ಮಗಳು ಮಹಾಲಕ್ಷಿಯನ್ನು ಅಪಹರಿಸಿ ತಮ್ಮ ಮನೆಗೆ ಕರೆದೊಯ್ದು ಹಿತ್ತಿಲಿನಲ್ಲಿದ್ದ ನೀರು ತುಂಬಿದ್ದ ತೊಟ್ಟಿಗೆ ಮುಳುಗಿಸಿ ಸಾಯಿಸಿದ್ದಾರೆ. ಆ ಬಳಿಕ ಬಾಲಕಿಯ ಮೃತ ದೇಹವನ್ನು ಪ್ಲಾಸ್ಟಿಕ್ ಚೀಲಕ್ಕೆ ತುಂಬಿ ದೇವರ ಮನೆಯಲ್ಲಿ ಬಚ್ಚಿಟ್ಟಿದ್ದಾರೆ.
ಎಷ್ಟೇ ಹುಡುಕಾಟ ನಡೆಸಿದರೂ ಮಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ತಾಯಿ ಗೌರಮ್ಮ ತೆರಕಣಾಂಬಿ ಪೊಲೀಸ್ ಠಾಣೆಗೆ ದೂರು ನೀಡಿದರು. ಕೂಡಲೇ ಗ್ರಾಮಕ್ಕೆ ತೆರಳಿದ ಪಿಎಸ್ಐ ರಾಧಾ ಬರುತ್ತಿದ್ದಂತೆ ರತ್ನಮ್ಮ ಓಡಿಹೋಗಿ ಮನೆಯ ಬಾಗಿಲು ಮುಚ್ಚಿಕೊಂಡಳು.
ಇದರಿಂದ ಅನುಮಾನಗೊಂಡ ಪೊಲೀಸರು ಮನೆಯಲ್ಲಿ ಹುಡುಕಾಟ ನಡೆಸಿದಾಗ ದೇವರ ಮನೆಯಲ್ಲಿ ಅನುಮಾನಾಸ್ಪದವಾಗಿಟ್ಟಿದ್ದ ಚೀಲವನ್ನು ಬಿಚ್ಚಿದಾಗ ಅದರಲ್ಲಿ ಮಹಾಲಕ್ಷ್ಮಿಯ ಮೃತದೇಹ ಪತ್ತೆಯಾಗಿದೆ.
ಕೂಡಲೇ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಮಗುವಿನ ಮೃತ ದೇಹವನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪಾಲಕರ ವಶಕ್ಕೆ ನೀಡಿದ್ದಾರೆ.
[…] ಇದನ್ನೂ ನೋಡಿ : ತನ್ನ ಸ್ವಂತ ಮಗಳನ್ನೇ ಕೊಲೆ ಮಾಡಿದ ಅಪ್ಪ […]