ಮತ್ತೆ ಅವನ ನೆನಪು ಕಾಡಿತು.‌‌..

0
233
Tap to know MORE!

ಯುಗ ಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ ಎಂಬಂತೆ ಪ್ರೀತಿಸಿದವರು ನಾವು. ಕಾಲೇಜು ದಿನಗಳಲ್ಲಿ ನಮ್ಮ ಪ್ರೀತಿಯನ್ನು ನೋಡಿ ಹೊಟ್ಟೆ ಉರಿ ಪಟ್ಟುಕೊಂಡವರು ಅದೆಷ್ಟು? ಒಂದೇ ತರಗತಿಯಲ್ಲಿ ಇದ್ದುದರಿಂದ ಪಾಠ ಮಾಡುವ ಶಿಕ್ಷಕರನ್ನು ನೋಡುವ ಬದಲು ಒಬ್ಬರನ್ನೊಬ್ಬರು ನಾವು ನೋಡಿದ್ದೆ ಹೆಚ್ಚು. ವಿರಾಮದ ಸಮಯದಲ್ಲಿ ಮಾತುಕತೆ, ಒಂದಿಷ್ಟು ತುಂಟಾಟ, ಗಲಾಟೆ ಬೇಸರವೂ ಕೂಡಿತ್ತು. ಸಂಜೆ ಕಾಲೇಜು ಅವಧಿ ಮುಗಿಯುತ್ತಾ ಬಂದಾಗ ಇಬ್ಬರಿಗೂ ತುಂಬಾ ಬೇಸರ. ಯಾಕೆಂದರೆ ಆಗ ನನ್ನ ಬಳಿ ಮೊಬೈಲ್ ಇರಲಿಲ್ಲ. ಹಾಗೋ ಹೀಗೋ ಒಮ್ಮೊಮ್ಮೆ ಅಮ್ಮನ ಮೊಬೈಲಿಂದ ಕದ್ದುಮುಚ್ಚಿ ಮಾತನಾಡುತ್ತಿದ್ದೆ. ಅದು ಕೂಡ ಭಯದಿಂದ ನಮ್ಮ ಕರೆ ಒಂದು ನಿಮಿಷ ಮೀರುತ್ತಿರಲಿಲ್ಲ.

ಅವನು ನನ್ನನ್ನು ತುಂಬಾ ಪ್ರೀತಿಸುತ್ತಿದ್ದ. ಅಷ್ಟೇ ಕಟ್ಟುಪಾಡುಗಳನ್ನೂ ಹಾಕುತ್ತಿದ್ದ. ಹುಡುಗರ ಜೊತೆ ಎಲ್ಲಾದರೂ ನಾನು ಮಾತನಾಡುವುದು ಕಂಡರೆ ಅವನಿಗೆ ಸಿಟ್ಟು ಬರುತ್ತಿತ್ತು. ಬಟ್ಟೆಯ ವಿಷಯದಲ್ಲೂ ತುಂಬಾ ಕಟ್ಟುನಿಟ್ಟು. ಯಾವುದಾದರೂ ಒಂದು ವಿಷಯಕ್ಕೆ ಸಿಟ್ಟುಬಂದರೆ ಅವನ ಕೋಪ ತಣಿಸಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಆ ಕೋಪದಲ್ಲಿ ಆಡುವ ಮಾತು ತುಂಬಾ ನೋವುಂಟು ಮಾಡುತ್ತಿತ್ತು. ಅದೇ ಕೋಪ ಸರಿ ಹೋದ ಮೇಲೆ ತೋರಿಸುವ ಪ್ರೀತಿಗೆ ಕರಗಿ ಹೋಗುತ್ತಿದ್ದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಅಷ್ಟು ಪ್ರೀತಿಸುತ್ತಿದ್ದ ಆ ವ್ಯಕ್ತಿ ಬದಲಾದದ್ದೇ ಅಚ್ಚರಿಯ ಸಂಗತಿ. ನಾನು ಪದವಿ ಶಿಕ್ಷಣ ಮುಗಿದ ನಂತರ ಉನ್ನತ ವಿದ್ಯಾಭ್ಯಾಸಕ್ಕಾಗಿ ಬೇರೆ ಕಾಲೇಜಿಗೆ ಸೇರಿದೆ. ಅವನೂ ಉದ್ಯೋಗಕ್ಕಾಗಿ ಬೇರೆ ಊರಿಗೆ ತೆರಳಿದ. ಕೆಲವೇ ಕೆಲವು ತಿಂಗಳಲ್ಲಿ ಅವನ ವರ್ತನೆ ವಿಚಿತ್ರವಾಗಿತ್ತು. ನಾನ್ಯಾರು ಮೂರನೇ ವ್ಯಕ್ತಿಯೆಂಬಂತೆ ಮಾತಿಲ್ಲ ಕಥೆಯಿಲ್ಲ. ಮಾತನಾಡಿದರೂ ಮನಸ್ಸಿಲ್ಲ ಎಂಬಂತೆ ವರ್ತಿಸುತ್ತಿದ್ದ.

ಪ್ರೀತಿ ಎಂಬ ಮಾಯಲೋಕದಲ್ಲಿ ತೇಲಿ ಹೋದೆ ನಾ

ಒಂದು ದಿನ ಬೇಸರ ತಡೆಯಲಾರದೆ ಕೇಳಿಯೇ ಬಿಟ್ಟೆ. ಏನಾಯಿತು ಎಂದು. ಪ್ರೀತಿಗೀತಿ ಎಲ್ಲಾ ನನಗಿಷ್ಟವಿಲ್ಲ. ತುಂಬಾ ಹಣವಿದೆ ಜೊತೆಗೆ ಆನಂದಿಸಲು ಗೆಳೆಯರಿದ್ದಾರೆ. ನೀನ್ಯಾರು? ನನಗ್ಯಾಕೆ? ಎಂದು ಫೋನ ಇಟ್ಟುಬಿಟ್ಟ.

ಇವತ್ತು ನನ್ನ ಲ್ಯಾಪ್ ಟಾಪ್ ನಲ್ಲಿ ಅವನು ಮತ್ತು ನಾನು ತೆಗೆದ ಫೋಟೋ ಕಣ್ಣಿಗೆ ಕಾಣಿಸಿತು. ಹಾಗೆ ನಮ್ಮಿಬ್ಬರ ಪ್ರೀತಿ ನೆನಪಾಯಿತು.

ಬದುಕು ನಾವೆಂದುಕೊಂಡಂತೆ ಇರುವುದಿಲ್ಲ. ಜೀವನದಲ್ಲಿ ಆಗುವ ಸ್ನೇಹ ಪ್ರೀತಿ ಯಾವುದು ಇವತ್ತು ಇದ್ದಹಾಗೆ ನಾಳೆ ಇರುವುದಿಲ್ಲ. ಬದಲಾವಣೆ ಜಗದ ನಿಯಮ.

ಆದರೆ ಇವತ್ತು ಏನು ಅಲ್ಲದ ವ್ಯಕ್ತಿ ನಾಳೆ ಶ್ರೇಷ್ಠ ವ್ಯಕ್ತಿ ಆಗಬಹುದು. ಇವತ್ತು ಶ್ರೇಷ್ಠ ವ್ಯಕ್ತಿಯಾದವನು ನಾಳೆ ಏನು ಅಲ್ಲ ಎಂಬಂತೆ ಆಗಿಬಿಡಬಹುದು. ಬಡವ ಶ್ರೀಮಂತರಾಗಬಹುದು, ಶ್ರೀಮಂತ ಬಡವನಾಗಬಹುದು. ಆದರೆ ಹಣ ಬಂದಿತೆಂದು ನಾವು ನಮ್ಮವರನ್ನು ನಮಗಾಗಿ ಇರುವವರನ್ನು ಕಡೆಗಣಿಸಿ ಮರೆತುಬಿಟ್ಟರೆ ಒಂದಲ್ಲ ಒಂದು ದಿನ ಅದಕ್ಕಾಗಿ ಪಶ್ಚಾತ್ತಾಪ ಪಡುತ್ತೇವೆ.

ಅದಕ್ಕೆ ಹೇಳುವುದು ನಿನ್ನ ಬಳಿ ಏನೂ ಇಲ್ಲದಾಗ ನಿನ್ನ ಜೊತೆ ಇದ್ದವರನ್ನು ಮರೆಯಬೇಡ ಮುಂದೆ ನಿನ್ನ ಬಳಿ ಹಣ ಐಶ್ವರ್ಯವಿದ್ದಾಗಲೂ ಹಿಂದೆ ನಿನ್ನ ಜೊತೆಗೆ ಇದ್ದವರನ್ನು ಕಡೆಗಣಿಸಬೇಡ.

ಚೈತ್ರಾ ರಾವ್
ಎಸ್.ಡಿ.ಎಂ ಕಾಲೇಜು ಉಜಿರೆ.

LEAVE A REPLY

Please enter your comment!
Please enter your name here