ಮತ ಚಲಾಯಿಸಲು ಮರದ ಕಡ್ಡಿ

0
175
Tap to know MORE!

ಹೊಸದಿಲ್ಲಿ : ಕೊರೊನಾ ಭೀತಿ ನಡುವೆ ದೇಶದಲ್ಲೇ ಮೊದಲ ಬಾರಿಗೆ ಬಿಹಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಚುನಾವಣೆಯಲ್ಲಿ ಸೋಂಕು ಹರಡದಂತೆ ಮತದಾನ ಮಾಡಲು ಮರದ ಕಡ್ಡಿಗಳು, ಖಾದಿ ಮಾಸ್ಕ್ ಗಳನ್ನು ಬಳಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಬೂತ್ ಗಳಲ್ಲಿರುವ ಇವಿಯಂ ಯಂತ್ರದಲ್ಲಿ ಚಿಹ್ನೆ ಇರುವ ಬಟನ್ ಅನ್ನು ಕೈಯಿಂದ ಒತ್ತುವ ಬದಲು ಮರದ ಕಡ್ಡಿಯಿಂದ ಒತ್ತಲು ಅವಕಾಶ ಕಲ್ಪಿಸಲಾಗವುದು. ಇದಕ್ಕಾಗಿ ಪ್ರತಿ ಮತದಾರನಿಗೂ ಮರದ ಸಣ್ಣ ಕಡ್ಡಿಗಳನ್ನು ಒದಗಿಸಲಾಗುವುದು. ಇದರ ಜತೆಗೆ ಮಾಸ್ಕ್ ಧರಿಸದೇ ಬರುವ ಮತದಾರರಿಗೆ ಖಾದಿ ಬಟ್ಟೆಯಿಂದ ತಯಾರಿಸಿದ ಮೂರು ಪದರಗಳ ಮಾಸ್ಕ್ ನೀಡಲಾಗುವುದು. ಮತಗಟ್ಟೆಯಲ್ಲಿ ಕೈತೊಳೆಯುವ ವ್ಯವಸ್ಥೆ ಮತ್ತು ಕೈಗವಸುಗಳನ್ನು ಒದಗಿಸಲಾಗುವುದು.

ಬಿಹಾರದಲ್ಲಿ ಈ ಬಾರಿ ಶೇ. 45 ಹೊಸ ಬೂತ್ ತೆರೆಯಲಾಗುವುದು ಮತ್ತು ಒಂದು ಮತಗಟ್ಟೆಯಲ್ಲಿ 1000 ಮಂದಿಗೆ ಮಾತ್ರ ಮತದಾನಕ್ಕೆ ಅವಕಾಶವಿರುತ್ತದೆ. ಕೊರೊನಾ ಪೀಡಿತರು ಹಾಗೂ 65 ವರ್ಷ ಮೇಲ್ಪಟ್ಟವರು ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ.

LEAVE A REPLY

Please enter your comment!
Please enter your name here