WATCH : ತರಗತಿಯೊಳಗೇ ಮದುವೆಯಾದ ವಿದ್ಯಾರ್ಥಿಗಳು – ಮಗಳನ್ನು ಮನೆಗೆ ಸೇರಿಸದ ಪೋಷಕರು!

0
184
Tap to know MORE!

ಅಮರಾವತಿ: ಇಲ್ಲಿ ಶಾಲೆಗಳು ಆರಂಭವಾಗಿದ ತಕ್ಷಣ ವಿದ್ಯಾರ್ಥಿಗಳಿಬ್ಬರು ತರಗತಿಯಲ್ಲೇ ಮದುವೆಯಾಗಿದ್ದಾರೆ. ಈ ವಿಡಿಯೋ ಕಳೆದ ಎರಡು ದಿನಗಳಿಂದ ಎಲ್ಲೆಡೆ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೋಷಕರು ಮಗಳನ್ನು ಮನೆಗೆ ಸೇರಿಸಿಲ್ಲ.

ತರಗತಿಯ ಒಳಗೆ ಹುಡುಗ ಹುಡುಗಿಗೆ ಅರಿಶಿಣದ ದಾರ ಕಟ್ಟಿ ಮದುವೆಯಾಗಿದ್ದು, ಗೊತ್ತಾದ ಕೂಡಲೇ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಹೊರಕ್ಕೆ ಹಾಕಿದ್ದರು. ಇದೀಗ ಪೋಷಕರೂ, ಈ ನಿರ್ಧಾರ ಕೈಗೊಂಡಿದ್ದು, ಸದ್ಯ ಮಕ್ಕಳ ಆಯೋಗದಲ್ಲಿ ಬಾಲಕಿಗೆ ಆಶ್ರಯ ನೀಡಲಾಗಿದೆ.

 

ಅಷ್ಟೇ ಅಲ್ಲ ಅಪ್ರಾಪ್ತರ ಮದುವೆಯಾಗಿರುವ ಕಾರಣ, ಈ ಮದುವೆಯನ್ನು ಅನೂರ್ಜಿತ ಮಾಡಲಾಗಿದೆ. ಹಿಂದೂ ವೈವಾಹಿಕ ಕಾಯ್ದೆಯ ಅಡಿ ಅಪ್ರಾಪ್ತರ ವಿವಾಹವು ವಿವಾಹವಲ್ಲ. ಅದಕ್ಕೆ ಕಾನೂನಿನಡಿ ಯಾವುದೇ ಮಾನ್ಯತೆ ಇಲ್ಲ. ಆದ್ದರಿಂದ ಈ ಮದುವೆಯನ್ನೂ ಅಧಿಕಾರಿಗಳು ಅಮಾನ್ಯ ಮಾಡಿದ್ದಾರೆ.

ಕಳೆದ ತಿಂಗಳು 17 ರಂದು ಈ ವಿವಾಹ ನಡೆದಿದ್ದು, ಬಾಲಕಿಯ ಸ್ನೇಹಿತೆ ವಿಡಿಯೊ ಮಾಡಿ, ತನ್ನ ಇತರ ಸ್ನೇಹಿತರೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾಳೆ. ಅದರ ಫೋಟೋ ಇದೀಗ ವೈರಲ್ ಆಗಿದೆ.

LEAVE A REPLY

Please enter your comment!
Please enter your name here