ಮದುವೆಯಾದ ಮರುದಿನವೇ ಪ್ರಿಯಕರನೊಂದಿಗೆ ಪರಾರಿಯಾದ ಮುಲ್ಕಿಯ ವಧು.!

0
422
Tap to know MORE!

ಮುಲ್ಕಿ ಜ.6: ಶಿಕ್ಷಕನೊರ್ವನನ್ನು ವಿವಾಹವಾದ ಯುವತಿಯೋರ್ವಳು ಮದುವೆಯ ಮರುದಿನವೇ ತನ್ನ ಪ್ರಿಯಕರನೊಂದಿಗೆ ಪರಾರಿಯಾದ ಘಟನೆ ಮುಲ್ಕಿಯಲ್ಲಿ ನಡೆದಿದೆ. ಈ ಕುರಿತು ಯುವತಿಯ ತಂದೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಡಿಸೆಂಬರ್ 28ರಂದು ಪುನರೂರು ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದು, ಯುವತಿಯು ಮುಲ್ಕಿಯ ವಾದೆರಬೆಟ್ಟು ಬಳಿಯ ವ್ಯಕ್ತಿಯೊಂದಿಗೆ ಚಿನ್ನ ಹಾಗೂ ನಗದಿನ ಸಮೇತ ಹೋಗಿದ್ದಾಳೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಉಡುಪಿ : ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಬೈಕ್ ಕದ್ದು ಪರಾರಿ!

ಹುಡುಗಿಯ ಪ್ರೇಮ ಸಂಬಂಧ ಕುರಿತು ಆಕೆಯ ಮನೆಯವರಿಗೆ ತಿಳಿದಿತ್ತು ಆದರೆ ಆಕೆ ಸಂಬಂಧ ಕೋಣೆಗೊಳಿಸುವುದಾಗಿ ಭರವಸೆ ನೀಡಿದ ಕಾರಣ ಈ ಮದುವೆ ನಿಶ್ಚಯಿಸಲಾಗಿತ್ತು. ವರನ ತಂದೆ ವಿಷಯ ತಿಳಿದು ಆಘಾತಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

OLX ನಲ್ಲಿ ಪ್ರಧಾನಿ ಮೋದಿಯವರ ಕಛೇರಿ ಮಾರಾಟಕ್ಕಿಟ್ಟ ದುಷ್ಕರ್ಮಿಗಳು | ನಾಲ್ವರ ಬಂಧನ

LEAVE A REPLY

Please enter your comment!
Please enter your name here