ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರು ಇಂದು ‘ಕಿಲ್ ಕರೋನಾ’ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು. ಕೋವಿಡ್-19 ರ ಹಿನ್ನೆಲೆಯಲ್ಲಿ ಪ್ರತಿಯೊಬ್ಬರ ಮನೆಯನ್ನೂ ತಲುಪುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ.
ವೈದ್ಯರ ದಿನಾಚರಣೆಯಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಅಭಿಯಾನವನ್ನು ಉದ್ಘಾಟಿಸಲಾಯಿತು. ಕೊರೋನಾ ಬಿಕ್ಕಟ್ಟಿನ ಮಧ್ಯೆ ವೈದ್ಯರ ಸೇವೆ ಮತ್ತು ಸಮರ್ಪಣೆಗಾಗಿ ರಾಜ್ಯದ ಜನರ ಪರವಾಗಿ ಮುಖ್ಯಮಂತ್ರಿಗಳು ಧನ್ಯವಾದ ಅರ್ಪಿಸಿದರು.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಭಿಯಾನವನ್ನು ಪ್ರಾರಂಭಿಸುವ ಮತ್ತು ರಾಜ್ಯದ ಪ್ರತಿಯೊಬ್ಬರನ್ನೂ ಹದಿನೈದು ದಿನಗಳೊಳಗೆ ಕೊರೋನಾ ಪರೀಕ್ಷೆಗೆ ಒಳಪಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಭಿಯಾನವು ರಾಜ್ಯ ರಾಜಧಾನಿ ಭೋಪಾಲ್ನಿಂದ ಪ್ರಾರಂಭವಾಗಲಿದೆ.
#KillCoronaAbhiyan ಗೆ ಸೇರಿ ಮತ್ತು ಮಧ್ಯಪ್ರದೇಶದಿಂದ ಕೊರೋನವೈರಸ್ ಅನ್ನು ತೆಗೆದುಹಾಕಲು ನಮಗೆ ಸಹಾಯ ಮಾಡಿ. ಅಂತರವಿರಲಿ – ಸುರಕ್ಷಿತವಾಗಿರಿ
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್