ಮನಸು – ಕನಸು

0
293
Tap to know MORE!

 

ಈ ಸೃಷ್ಟಿಯ ಪ್ರತಿಯೊಂದು ಜೀವಿಗಳಿಗೂ ಭಾವನೆಗಳಿವೆ. ಆದರೆ ಸಾಮಾನ್ಯವಾಗಿ ಪ್ರತಿಯೊಂದೂ ಜೀವಿಗಳಲ್ಲಿಯೂ ಮನಸ್ಸಿನ ಭಾವನೆಗಳು ವ್ಯಕ್ತವಾಗುವುದು ಮುಖದ ಮೂಲಕವಾಗಿ. ಅದರಲ್ಲಿಯೂ ಈ ಬುದ್ಧಿ ಜೀವಿ ಮನುಷ್ಯನಂತೂ ವಾಕ್ ಚಾತುರ್ಯವಿದ್ದುದರಿಂದ ಕಪಟ ಮಾತುಗಳನ್ನಾಡುತ್ತಿರುವನು ಮನಸ್ಸಿನ ವಿರುದ್ಧವಾಗಿ.

ಮನಸ್ಸು ಯಾವಾಗಲೂ ಸ್ಥಿರವಾಗಿರುವುದು ಆದರೆ ಸಮಯ – ಸಂದರ್ಭ ಹಾಗೂ ಸನಿಹದ ಜನರಿಗನುಗುಣವಾಗಿ ಯೋಚನಾಲಹರಿಯು ಚಂಚಲವಾಗುವುದು. ಮನುಷ್ಯ ಸ್ವಭಾವತಃ ಸಕಾರಾತ್ಮಕ ಅಥವಾ ನಕಾರಾತ್ಮಕ ಧೋರಣೆಗಳನ್ನು ಹೊಂದಿರುವಂತೆ ಭಾಸವಾಗುವರು. ಆದರೆ ಮನಸ್ಸಿನಲ್ಲಿ ಇವು ಕನಸಿನ ರೂಪದಲ್ಲಿ ಸುಪ್ತವಾಗಿರುವವು.

ಕೆಲವೊಮ್ಮೆ ನನಸಾಗದ ಕನಸುಗಳಿಂದ ಮನಸ್ಸು ದುರ್ಬಲಗೊಳ್ಳುವುದು. ಹಾಗಂತ ಮನಸ್ಸಿನಲ್ಲಿ ಸುಂದರ ಸ್ವಪ್ನಗಳು ಮೊಳಕೆಯೊಡೆಯದು ಎಂದಲ್ಲ. ಕೆಲವೊಮ್ಮೆ ಕನಸುಗಳನ್ನು ನನಸಾಗಿಸುವ ವಾತಾವರಣವೇ ಒದಗದಿರಬಹುದು. ಇಂತಹ ಸಮಯದಲ್ಲಿ ಮನುಷ್ಯ ದುರ್ಬಲನಾಗುವನು.

ಇನ್ನು ಕನಸ್ಸನ್ನೇ ಕಾಣದಿರುವ ಬರಡಾಗಿರುವ ಮನಸುಗಳು ಅದೆಷ್ಟೋ.! ಅಂತಹ ಮನಸುಗಳು ಲೋಕದ ಚಿಂತೆಯಲ್ಲೇ ಇರುವುದಿಲ್ಲ. ಕೆಲವೊಮ್ಮೆ ಕನಸಿನ ಲೋಕದಲ್ಲಿ ಮನಸು ತೇಲಾಡುತ್ತಿದ್ದರೆ ಅಂತಹ ಮನುಷ್ಯ ಜೀವನದಲ್ಲಿ ಯಾವುದೇ ರೀತಿಯ ಸಾಧನೆಯನ್ನು ಮಾಡಲಾರ. ಹಾಗಾಗಿ ಮನಸ್ಸಿಗೆ ಕಡಿವಾಣ ಹಾಕುವುದೆಂದರೆ ಕನಸುಗಳನ್ನು ನನಸಾಗಿಸುವುದು ಎಂದರ್ಥ. ಅದು ಸಕಾರಾತ್ಮಕವಾಗಿ ನಮ್ಮ ಪರಿಸ್ಥಿತಿಗೆ ಅನುಗುಣಾವಾಗಿದ್ದಾಗ ಮಾತ್ರ.

ಆದ್ದರಿಂದ ಜೀವನವು ಸುಲಲಿತವಾಗಿ ಸುಂದರ ಕನಸುಗಳು ಸುಪ್ತ ಮನಸ್ಸಿನಲ್ಲಿ ಹುದುಗಿರಬೇಕು ಹಾಗೂ ಬೇರೆಯವರ ಜೀವನ ವ್ಯರ್ಥವಾಗದಂತೆ ನಮ್ಮ ಜೀವನಕ್ಕೊಂದು ಸಾರ್ಥಕತೆ ಸಿಗುವಂತೆ ಮನಸ್ಸು ಚಿಂತಿಸುತ್ತಿರಬೇಕು.

ಉತ್ತಮ ಕನಸುಗಳ ಆಗರ ಈ ಸುಪ್ತ ಮನಸಾಗಲಿ

ಚೈತನ್ಯ ಪ್ರಕಾಶ್, ಪಂಜಿಬಲ್ಲೆ

LEAVE A REPLY

Please enter your comment!
Please enter your name here