ಮನೆಯೇ ಮೊದಲ ಪಾಠ ಶಾಲೆ

0
92
Tap to know MORE!

ಬಾಲ್ಯದ ದಿನಗಳು ಕಳೆದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮುಗಿಸಿ ಪ್ರಸ್ತುತ ಬಿ.ಎಡ್ ವಿಧ್ಯಾಭ್ಯಾಸವನ್ನು ಮುಗಿಸುವ
ಹಂತದಲ್ಲಿ ಬಂದು ಮುಟ್ಟಿದ್ದೇನೆ. ಈ ಸಂದರ್ಭದಲ್ಲಿ ನನಗೆ ನನ್ನ ತಾಯಿ ನಾಡು, ನುಡಿ, ಭಾಷೆ ಬಗ್ಗೆ ಜ್ಞಾನವನ್ನು ಮನೆಯಲ್ಲಿ ಪಡೆದು ಮನೆಯೇ ಮೊದಲ ಪಾಠ ಶಾಲೆ ಎಂಬ ಧ್ಯೇಯ ವಾಕ್ಯ ಓದಲು ತುಂಬಾ
ಸಂತೋಷವಾಗುತ್ತದೆ. ಕಾರಣ ಇಷ್ಟೇ, ನನ್ನ ಈ ವಯಸ್ಸಿನಲ್ಲಿ ನನ್ನ ಮಾತೃಭಾಷೆ  ಜೊತೆಗೆ  ಸ್ಥಳೀಯ ಭಾಷೆಗಳು ಹಾಗೂ ಇಂಗ್ಲೀಷ್ ಭಾಷೆಯ ಜ್ಞಾನವನ್ನು ಹೊಂದಿರುತ್ತೇನೆ.  ಈಗ  ತಿಳಿಯ
ಪಡಿಸುವ ವಿಷಯ, ನಾವು ದಕ್ಷಿಣ ಕನ್ನಡದವರು. ಹಿರಿಯರ ಕಾಲದಿಂದಲೂ ಇಲ್ಲಿಯ ಜನರು ಅವಿಭಜಿತ
ಕುಟುಂಬ ಪ್ರವೃತ್ತಿಯವರು. ಪ್ರಧಾನ ಕಸಬು ಕೃಷಿ, ಹೀಗಿರುವಲ್ಲಿ ಶಿಕ್ಷಣವನ್ನು ಪಡೆದು ಕುಟುಂಬ ಸದಸ್ಯರ ಮಕ್ಕಳು ವಿಧ್ಯಾರ್ಥಿಗಳಾಗಿ ಶಿಕ್ಷಣವನ್ನು ಪಡೆದು ಪ್ರಗತಿಯನ್ನು ಅವಲೋಕಿಸುವಂತಹ ಕಾಲಗಟ್ಟದಲ್ಲಿ ನಾವಿರುವಾಗ ಸಹಜವಾಗಿಯೇ ಉದ್ಯೋಗವನ್ನು ಅರಸಿ ಭಾರತ ದೇಶದ ಎಲ್ಲಾ
ರಾಜ್ಯಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ದುಡಿಯುವ ಅನಿವಾರ್ಯತೇ ಬಂದೇ ಬಂದಿದೆ. ಹಾಗೆನೇ
ಈ ಸ್ಪರ್ಧಾತ್ಮಕ ಯುಗದಲ್ಲಿ ಹೆತ್ತವರಿಬ್ಬರೂ ದುಡಿಯುವುದು ಕೂಡಾ ಅನಿವಾರ್ಯವಾಗಿಬಿಟ್ಟಿದೆ. ಹೀಗಿರುವಾಗ ಕೂಡು ಕುಟುಂಬಗಳನ್ನು ಬಿಟ್ಟು ಅವರವರ ಮಕ್ಕಳೊಂದಿಗೆ ಬೇರೆ ಬೇರೆ
ರಾಜ್ಯಗಳಲ್ಲಿ, ವಿದೇಶಗಳಲ್ಲಿ ನೆಲೆನಿಲ್ಲುವುದು ಅನಿ ವಾರ್ಯವಾಗಿರುವುದು ವಾಸ್ತವ ಸತ್ಯ.ನಮ್ಮ ಪ್ರದೇಶದ ಒ0ದು ಒಳ್ಳೆಯ ಸ0ಪ್ರದಾಯ ಹೇಳುವುದಾದರೇ ಪರವೂರಿನಲ್ಲಿ ಕಾರಣಾಂತರದಿಂದ ನೆಲೆಸಿರುವವರು ಊರಿನಲ್ಲಿ ಕೂಡು ಕುಟುಂಬದ ಯಾವುದೇ ಕಾರ್ಯಕ್ರಮವಿದ್ದಲ್ಲಿ ಪರಊರಿನಲ್ಲಿ ನೆಲೆಸಿಕೊಂಡಿರುವವರು ಕುಟುಂಬ ಸಮೇತರಾಗಿ  ಕಾರ್ಯಕ್ರಮ ಇರುವ ಮೂಲ ಕುಟುಂಬದ ಮನೆಗೆ  ಬರುವುದು ಸಹಜ ಪದ್ದತಿಯಾಗಿ ಬಂದು ನಿಂತಿದೆ.
ಕುಟುಂಬದ ಸದಸ್ಯರು ಅವರವರ ಮಕ್ಕಳೊಂದಿಗೆ ಕುಟುಂಬ ಸದಸ್ಯರೊಂದಿಗೆ ಸೇರಿಕೊಳ್ಳುವಾಗ
ತುಂಬಾ ಸಂತೋಷವಾಗುತ್ತದೆ. ತುಂಬಾ ಹೆಮ್ಮೆಯ ವಿಷಯ.
ಇದೀಗ ಇಲ್ಲಿ ಕಾಣ ಸಿಗುವ ಸಮಸ್ಯೆ ಏನೆಂದರೆ ಹೊರ ರಾಜ್ಯಗಳಲ್ಲಿ, ವಿದೇಶಗಳಲ್ಲಿ ದುಡಿಯುತ್ತಿರುವ ದಂಪತಿಗಳ ಮಕ್ಕಳ ಶಿಕ್ಷಣವು ಆ ಪರಿಸರದ ಬಾಷೆಗಳಲ್ಲಿ ಕಲಿತಿರುತ್ತಾರೆ.
ವಿಧ್ಯಾಭ್ಯಾಸವು ಸುಗಮವಾಗಿ ನಡೆಯುತ್ತದೆ. ವಿದ್ಯಾರ್ಥಿಗಳ ಹೆತ್ತವರು ಆ ಪ್ರದೇಶದ ಭಾಷೆಯಲ್ಲಿಯೇ
ಮಕ್ಕಳಿಗೆ ಕಲಿಯಲು ಪ್ರೋತ್ಸಾಹಿಸುತ್ತಾರೆ, ಮಕ್ಕಳು ಕಲಿತು ಉತ್ತೀರ್ಣರಾಗುತ್ತಾರೆ. ಇಂಥಾ
ಸಂದರ್ಭಗಳಲ್ಲಿ ಹೆತ್ತವರೂ ಕೂಡಾ ಮನೆಯಲ್ಲಿ ಕೂಡ ಅವರ ಮಾತೃ ಭಾಷೆಯನ್ನು ಆಡದೇ, ನಮ್ಮ
ಮಾತೃಭಾಷೆಯ ಜ್ಞಾನವೇ ಈ ಮಕ್ಕಳಿಗೆ ಇರುವುದಿಲ್ಲ. ಊರಿಗೆ ಬಂದಿರುವ ಸಂದರ್ಭದಲ್ಲಿ ಈ
ಕೂಡು-ಕುಟುಂಬದ ಚಿಲಿಪಿಲಿ ಮಕ್ಕಳು ಒಂದೇ ಅಂಗಳದಲ್ಲಿ ಒಂದೇ ಗುಂಪಾಗಿ ಆಡಲು ಅವಕಾಶ
ಸಿಕ್ಕಿದರೂ ಪರಕೀಯರಂತೇ ಒಂದು ಗುಂಪಾಗಿ ಆಡಲು ಮರೆತಂತಿರುತ್ತಾರೆ, ಕಾರಣ ಇಷ್ಟೇ ಕೆಲವು ಮಕ್ಕಳಿಗೆ ಮಾತೃಭಾಷೆಯ ಅರಿವು ಇದೆ. ಕೆಲವೊಂದು ಮಕ್ಕಳಿಗೆ ಮಾತೃಭಾಷೆಯ ಅರಿವು ಇಲ್ಲ.
ಒಬ್ಬೊಬ್ಬರು ಮಾತನಾಡುವುದು ಒಬ್ಬೊಬ್ಬರಿಗೆ ಅರ್ಥಆಗುವುದಿಲ್ಲ ಇದು ಇಂದಿನ ಬೇಸರದ ಪರಿಸ್ಥಿತಿಯಾಗಿ ಬಂದು ನಿಂತಿದೆ. ಆದುದರಿಂದ ಮೇಲಿನ ಧ್ಯೇಯ ವಾಕ್ಯದ ಹಾಗೇ ಎಲ್ಲಾ ಮಕ್ಕಳ ಹೆತ್ತವರೊಂದಿಗೆ ನಾನು ಆಶಿಸುವುದು ಇಷ್ಟೇ, ಎಲ್ಲರೂ ಒಳ್ಳೆಯ ಶಿಕ್ಷಣವನ್ನು ಪಡೆಯಬೇಕು. ಕೆಲವೊಂದು ಭಾಷೆಗಳ ಜ್ಞಾನವನ್ನು ಪಡೆಯುವ ಈ ಸಂದರ್ಭದಲ್ಲಿ ಯಾವ ಕಾರಣಕ್ಕೂ ಮನೆಯಲ್ಲಿ  ನಮ್ಮ ಮಾತೃಭಾಷೆಯ ಪರಿಜ್ಞಾನವನ್ನು ನಾವೆಲ್ಲರೂ ಕೊಟ್ಟೇ ಕೊಡುವ ಅನಿವಾರ್ಯತೆ ಇದೆ . ಮಾತೃಭಾಷೆ ವಿಷಯದಲ್ಲಿ ಮನೆಯೇ ಮೊದಲ ಪಾಠಶಾಲೆಯಾಗಿ  ನಾನು ಯಶಸ್ವಿಯಾಗಿದ್ದೇನೆ, ನೀವು ಕೂಡ ಯಶಸ್ವಿಯಾಗಿರಿ.

ಡೆಮ್ಸಿ ಸಿನೇಡ್ ಡಿಸೋಜ
ದ್ವಿತೀಯ ವರ್ಷದ ಬಿಎಡ್ ವಿದ್ಯಾರ್ಥಿನಿ,  ಸಂತ ಅಲೋಶಿಯಸ್ ಶಿಕ್ಷಣ ತರಬೇತಿ ಸಂಸ್ಥೆ, ಮಂಗಳೂರು

LEAVE A REPLY

Please enter your comment!
Please enter your name here