ಮನೆಯಲ್ಲೇ ಇದ್ದರೆ ಕೊರೊನಾ ಸೋಂಕು ತಗಲುವುದಿಲ್ಲ ಎಂದು ಹಲವು ರಾಷ್ಟ್ರಗಳಲ್ಲಿ ಲಾಕ್ಡೌನ್ ಜಾರಿ ಮಾಡಿದ್ದರು. ಆದರೆ ಇದರಿಂದ ಸೋಂಕನ್ನು ಸಂಪೂರ್ಣವಾಗಿ ತಡೆ ಗಟ್ಟಬಹುದು ಎಂಬುದು ಕೂಡ ಸಂಪೂರ್ಣ ನಿಜವಲ್ಲ. ಕೊರೊನಾ ವೈರಾಣುಗಳು ಮನೆಯ ಸದಸ್ಯರ ನಡುವೆ ಅತ್ಯಂತ ವೇಗದಲ್ಲಿ ಪ್ರಸರಣಗೊಳ್ಳುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.
‘ಲ್ಯಾನೆಟ್ಸ್’ ನಲ್ಲಿ ಪ್ರಕಟಗೊಂಡ ಈ ವರದಿ ಆತಂಕವನ್ನು ಸೃಷ್ಟಿಸಿದೆ. ಚೀನಾದ ಗ್ವಾಂಗ್ಔಜ್ ಪ್ರಾಂತ್ಯದಲ್ಲಿ ತಜ್ಞರು 349 ಸೋಂಕಿತ ವ್ಯಕ್ತಿಗಳ ಮೇಲೆ ಸಂಶೋಧನೆ ನಡೆಸಿದ್ದರು ಈ ಪೈಕಿ 349 ವ್ಯಕ್ತಿಗಳ ಜೊತೆಗೆ ಜೀವಿಸುತ್ತಿದ್ದ 1964 ಮಂದಿಗೆ ಸೋಂಕು ಅತ್ಯಂತ ವೇಗದಲ್ಲಿ ತಲುಪಿದೆ. ಸೋಂಕಿತ ವ್ಯಕ್ತಿಗೆ ಕೆಮ್ಮು ಜ್ವರ ಕಾಣಿಸಿಕೊಳ್ಳುವ ಮೊದಲೇ ಮನೆಯ ಸದಸ್ಯರಿಗೆ ವೈರಾಣು ತಗಲಿರುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಸಾಮಾನ್ಯವಾಗಿ ಒಬ್ಬಂಟಿ ಅಥವಾ ಪ್ರತೇಕವಾಗಿ ಜೀವಿಸುವ ಮಂದಿಗೆ ಕೊರೊನಾ ತಗಲುವ ಸಾಧ್ಯತೆ ಶೇ. 2.4 ರಷ್ಟು. ಆದರೆ, ಮನೆಯೊಳಗೆ ಜೀವಿಸುವವರಿಗೆ ಸೋಂಕು ತಗಲುವ ಸಾಧ್ಯತೆ 17.1ರಷ್ಟು ಅಧಿಕ. ಎಲ್ಲ ಸದಸ್ಯರಿಗೂ ಸೋಂಕು ತಗುಲಿದ ಪ್ರಕರಣಗಳು ಶೇ. 12.4ರಷ್ಟು ದಾಖಲಾಗಿವೆ.