ನವದೆಹಲಿ ಡಿ.27: ಪ್ರಧಾನಿ ನರೇಂದ್ರ ಮೋದಿ ತಮ್ಮ 72ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹಲವು ಪ್ರಮುಖ ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಶಿಕ್ಷಣ, ಕೊರೋನಾ ಕಲಿಸಿದ ಪಾಠ, ಸಾಮಾಜಿಕ ಕಾರ್ಯ, ಪ್ರಾಣಿ ಪಕ್ಷಿಗಳಿಗೆ ನೆರವು ಸೇರಿದಂತೆ ಹಲವು ಮಹತ್ವದ ಮಾಹಿತಿ ಜೊತೆಗೆ ಕೆಲ ಅಂಕಿ ಅಂಶಗಳನ್ನು ತೆರೆದಿಟ್ಟಿದ್ದಾರೆ. ನೀವು ಬರೆದ ಸಾವಿರಾರು ಪತ್ರಗಳು ನನ್ನ ಬಳಿ ಇದೆ. ಸಾಮಾಜಿಕ ಮಾಧ್ಯಮದ ಮೂಲಕ, ಫೋನ್ ಮೂಲಕ ಹಲವರು ಮಾತನಾಡಿದ್ದಾರೆ. ಎಲ್ಲರ ಮಾಹಿತಿ, ಮಾತುಗಳನ್ನು ಕ್ರೋಢೀಕರಿಸಿ, ಇಂದಿನ ಮನ್ ಕಿ ಬಾತ ಆರಂಭಿಸುತ್ತಿದ್ದೇನೆ ಎಂದು ಮೋದಿ ಈ ವರ್ಷದ ಕೊನೆಯ ಹಾಗೂ 19ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ದೇಶವನ್ನುದ್ದೇಶಿ ಮಾತನಾಡಿದರು.
ಮೋದಿ ಮನ್ ಕಿ ಬಾತ್ನಲ್ಲಿ ಕರ್ನಾಟಕದ ಶ್ರೀರಂಗಪಟ್ಟಣದಲ್ಲಿರುವ ವೀರಭದ್ರ ಸ್ವಾಮಿ ದೇವಸ್ಥಾನ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್ ಕಾಯಕವನ್ನು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ. ಇನ್ನು ಸ್ವಚ್ಚತಾ ಕಾರ್ಯದಲ್ಲಿ ತೊಡಗಿರುವ ಕರ್ನಾಟಕದ ಯುವ ದಂಪತಿಗಳಾದ ಅನುದೀಪ್ ಹಾಗೂ ಮಿನೀಶಾ ಕಾರ್ಯವನ್ನು ಮೋದಿ ಪ್ರಶಂಸಸಿದ್ದಾರೆ.
ಇದನ್ನೂ ಓದಿ:ಜಮ್ಮು ಕಾಶ್ಮೀರದಲ್ಲಿ ಆಯುಷ್ಮಾನ್ ಭಾರತ್ – “ಪಿಎಂ-ಜೆಎವೈ ಸೇಹತ್” ಗೆ ಚಾಲನೆ ನೀಡಿದ ಪ್ರಧಾನಿ ಮೋದಿ
ಸಾವಿರ ವರ್ಷಕ್ಕಿಂತ ಹಳೆಯ ಶ್ರೀರಂಗ ಪಟ್ಟಣದ ವೀರಭದ್ರ ಸ್ವಾಮಿ ದೇವಸ್ಥಾನದ ಹಾಳು ಕೊಂಪೆಯಾಗಿ ಬಿದ್ದಿತ್ತು. ಗಿಡ ಗಂಟಿಗಳು, ಪೊದೆ ಬೆಳೆದು ದೇವಸ್ಥಾನ ಸಂಪೂರ್ಣ ಹಾಳಾಗಿತ್ತು. ಈ ದೇವಸ್ಥಾನವನ್ನ ಯುವಬ್ರಿಗೇಡ್ನ ಉತ್ಸಾಹಿ ಯುವಕರ ತಂಡ ಜೀರ್ಣೋದ್ದಾರ ಮಾಡಿದೆ. ಕರ್ನಾಟಕದಲ್ಲಿರುವ ಯುವ ಬ್ರಿಗೇಡ್ ಮಾಡಿದ ಅತ್ಯಂತ ಉತ್ತಮ ಸಾಮಾಜಿಕ ಕೆಲಸವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಪೋಸ್ಟ್ ಮಾಡಿದ ಯುವ ಬ್ರಿಗೇಡ್, ಇಲ್ಲಿ ಸ್ವಚ್ಚತಾ ಕಾರ್ಯಗಳನ್ನು ಮಾಡಿದೆ. ದೇವಸ್ಥಾನವನ್ನು ಸಂಪೂರ್ಣವಾಗಿ ಜೀರ್ಣೋದ್ದಾರ ಮಾಡಿದೆ. ಈ ಮೂಲಕ ಭಾರತದ ಭವ್ಯ ಪರಂಪರೆಯನ್ನು ಮತ್ತೆ ಸ್ಥಾಪಿಸುವಲ್ಲಿ ಯುವ ಬ್ರಿಗೇಡ್ ಮಹತ್ವದ ಕಾರ್ಯವಹಿಸಿದೆ ಎಂದು ಮೋದಿ ಮನ್ ಕಿ ಬಾತ್ನಲ್ಲಿ ಹೇಳಿದ್ದಾರೆ.
ಸುದ್ದಿಗಳನ್ನು ವಾಟ್ಸಾಪ್ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ
ಕರ್ನಾಟಕದ ಅನುದೀಪ್ ಹಾಗಾ ಮಿನೀಶಾ ದಂಪತಿ ಇತ್ತೀಚೆಗೆ ಮದುವೆಯಾಗಿದ್ದಾರೆ. ಮದುವೆಯಾದ ಬಳಿಕ ಎಲ್ಲರೂ ಪ್ರಯಾಣ ಮಾಡುತ್ತಾರೆ. ಆದರೆ ಈ ದಂಪತಿ ಮದುವೆಯಾದ ಬೆನ್ನಲ್ಲೇ ಒಂದು ಸಂಕಲ್ಪ ಮಾಡಿದ್ದಾರೆ. ನಮ್ಮ ಪರಿಸರ ಸ್ವಚ್ಚಗೊಳಿಸಲು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಮದುವೆಯಾದ ಬಳಿಕ ಭಾರತದ ಹಲವೆಡೆ ಪ್ರಯಾಣಿಸಿದ ಅನುದೀಪ್ ಹಾಗೂ ಮಿನೀಶಾ ಪ್ರವಾಸಿ ತಾಣಗಳಲ್ಲಿ ಸ್ವಚ್ಚತಾ ಕಾರ್ಯ ಮಾಡಿದ್ದಾರೆ. ಕರ್ನಾಟಕದ ಸೋಮೇಶ್ವರ ಸಮುದ್ರ ಕಿನಾರೆಯನ್ನು ಸಂಪೂರ್ಣ ಸ್ವಚ್ಚಗೊಳಿಸಿದ ಹೆಗ್ಗಳಿಗೆ ಅನುದೀಪ್ ಹಾಗೂ ಮಿನೀಶಾಗೆ ಸಲ್ಲಲಿದೆ ಎಂದು ಮೋದಿ ಹೇಳಿದ್ದಾರೆ.
BIG NEWS| ಕೇರಳದ ರಾಜಧಾನಿಯ ಮೇಯರ್ ಆಗಿ 21 ವರ್ಷದ B.Sc ವಿದ್ಯಾರ್ಥಿನಿ ಆಯ್ಕೆ!