ಮರುಕಳಿಸೀತೇ ಮಹಾಭಾರತ…?

0
161
Tap to know MORE!

ಇಡೀ ವಿಶ್ವದಲ್ಲಿ ಮಹಾಭಾರತಕ್ಕೆ ಸರಿಸಮಾನವಾಗಬಲ್ಲ ಮಹಾಗ್ರಂಥ ಮತ್ತೊಂದಿಲ್ಲವೇನೋ. ಈ ಗ್ರಂಥದಲ್ಲಿ ಪ್ರೀತಿ- ದ್ವೇಷ, ಒಳಿತು-ಕೆಡುಕು, ಯುದ್ಧ- ಶಾಂತಿ, ಅವಮಾನ-ಸನ್ಮಾನ ಶೋಷಣೆ-ರಕ್ಷಣೆ, ರಾಜಕೀಯ, ಸಂಬಂಧಗಳು, ತ್ಯಾಗ, ಶೌರ್ಯ ಎಲ್ಲವನ್ನೂ ಒಳಗೊಂಡ ಚಿತ್ರಣವನ್ನು ವೇದವ್ಯಾಸರು ವಿಶ್ವಕ್ಕೆ ನೀಡಿದ್ದಾರೆ.

ಈಗ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳು ನಮಗೆ ಮಹಾಭಾರತವನ್ನು, ಅದರ ಪಾತ್ರಗಳನ್ನು ನೆನಪಿಸುತ್ತವೆ. ಅವು ಹೊಸ ರೂಪಗಳನ್ನು ಪಡೆದುಕೊಂಡಿವೆಯಷ್ಟೇ. ಗ್ರಂಥದಲ್ಲಿ ವಿವರಿಸಿರುವ ಹಾಗೆ ಅಧಿಕಾರಕ್ಕಾಗಿ ಸೆಣಸಾಡುವ ಪಾಂಡವರು ಮತ್ತು ಕೌರವರು ಈಗಿನ ಸಮಾಜದಲ್ಲಿನ ರಾಜಕೀಯ ಪಕ್ಷಗಳ ರೂಪದಲ್ಲಿದ್ದಾರೆ. ಈಗ ಸ್ತ್ರೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ನೋಡಿದಾಗ ಮಹಾಭಾರತದ ದ್ರೌಪದಿಯ ವಸ್ತ್ರಾಭರಣ ನೆನಪಾಗುತ್ತದೆ. ಅಲ್ಲಿ ದ್ರೌಪದಿ ನೀಡಿದ ಶಾಪಕ್ಕೆ ಕುರುಕುಲ ನಾಶವಾದಂತೆಯೇ ಇಲ್ಲಿ ದುಷ್ಠರ ಅಂತ್ಯವಾಗುತ್ತಿದೆಯೇ…?

ಅಧಿಕಾರ ಮತ್ತು ಸಂಪತ್ತಿನ ಸುಖದಲ್ಲಿರುವ ದುರ್ಯೋಧನನಂತಹ ಶ್ರೀಮಂತರು, ಅಂದರೆ ಈಗಿನ ಅಧಿಕಾರಿಗಳು ಪಾಪ ಏನು ಅರಿಯದ ಅಮಾಯಕ ಕರ್ಣನಂತಹ ಬಡಪಾಯಿಗಳ ಬದುಕನ್ನು ಹಿಂಡೆ ಹಿಪ್ಪೆಯಾಗಿಸಿದ್ದಾರೆ. ಅವರೂ ಧರ್ಮಪಾಲಕರಾದರೂ ತುಟಿಬಿಚ್ಚದ ಪರಿಸ್ಥಿತಿ ನಿರ್ಮಾಣ ಈ ವ್ಯವಸ್ಥೆಯಲ್ಲಿದೆ.

ಪಾಕಿಸ್ತಾನದ ಕುಟಿಲಬುದ್ಧಿ ಶಕುನಿಯನ್ನು ನೆನಪಿಸಿದರೆ, ಧರ್ಮರಾಯನ ಧರ್ಮ, ಭೀಮಾರ್ಜುನರ ಶೌರ್ಯ, ನಕುಲ-ಸಹದೇವರ ತಾಳ್ಮೆ ಹಾಗೂ ಕಷ್ಟ ಸಹಿಷ್ಣುತೆಯ ಭಾವ ಭಾರತೀಯ ಸೈನಿಕರಲ್ಲಿ, ಪ್ರತಿಯೊಬ್ಬ ಭಾರತೀಯನಲ್ಲಿದೆ. ಕುಂತಿಯ ಸಮರ್ಪಣಾ ಭಾವ ಮತ್ತು ಸ್ವಾಮಿನಿಷ್ಠೆ ಭಾರತೀಯ ಸ್ತ್ರೀಯರದ್ದಾಗಿದೆ.

ಮಹಾಭಾರದಲ್ಲಿ ದುಷ್ಟರ ದಮನವಾಗುವುದರ ಜೊತೆಗೆ, ಶಿಷ್ಟರೆನಿಸಿಕೊಂಡ ಪಾಂಡವರೂ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿಯೇ ತೀರುತ್ತಾರೆ. ಇದಕ್ಕೆ ಭಗವಂತ ಶ್ರೀಕೃಷ್ಣನೂ ಹೊರತಾಗಲಿಲ್ಲ. ಮಹಾಭಾರತ, ಭಗವದ್ಗೀತೆ ನಮ್ಮೆಲ್ಲಾ ಸಮಸ್ಯೆಗಳಿಗೆ, ದ್ವಂದ್ವಗಳಿಗೆ ಪರಿಹಾರ ನೀಡುತ್ತದೆ. ಈಗಲೂ ಅದು ಮರುಕಳಿಸಿದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ಲವೇ…?

– ಶಂಕರ್ ಓಬಳಬಂಡಿ,
ವಿಶ್ವವಿದ್ಯಾನಿಲಯ ಕಾಲೇಜು 

LEAVE A REPLY

Please enter your comment!
Please enter your name here