ಮರೆತರೂ‌ ಮರೆಯಲಾಗದ ನೆನಪಿನ ದಿನಗಳು

0
181
Tap to know MORE!

ಆ ಏಳು ದಿನಗಳು ಜೀವನದುದ್ದಕ್ಕೂ ಮರೆಯಲಾಗದ ದಿನಗಳವು.ಅದೇ ಎನ್ಎಸ್ಎಸ್ ಶಿಬಿರದ ದಿನಗಳು.ಜೀವನಪಾಠವನ್ನು ಅರಿಯಬೇಕಾದರೆ,ಗೆಳೆತನದ ಮೌಲ್ಯ,ಸೇವಾಮನೋಭಾವ,ಒಗ್ಗಟ್ಟು,ಸಮಾನತೆ ಇವೆಲ್ಲವನ್ನು ಒಟ್ಟಾಗಿ ಅನುಭವಿಸಬೇಕಾದರೆ ಅದು ಎನ್ಎಸ್ಎಸ್ ನಂತಹ ಶಿಬಿರಗಳಿಂದ ಸಾಧ್ಯ.

ಎನ್ಎಸ್ಎಸ್ ಅಂತಂದ್ರೆ ಬೆಳಿಗ್ಗೆ ಬೇಗ ಏಳೋದು,ರಸ್ತೆ ಬದಿ ಸ್ವಚ್ಛ ಮಾಡೋದು,ಶ್ರಮದಾನ ಮಾಡುವುದು,ಗುಂಡಿ ತೋಡೋದು,ಗಿಡ ನೆಡುವುದು, ಹೀಗೆ ಕೇವಲ ಕೆಲಸ ಮಾತ್ರ ಮಾಡೋದು ಅಂತ ಅಂದುಕೊಂಡಿದ್ದ ನನಗೆ ಮೊದಲ ಬಾರಿಗೆ ೨೦೧೭ರಲ್ಲಿ ಶಿಬಿರದಲ್ಲಿ ಪಾಲ್ಗೊಂಡಾಗ ನೈಜ ವಿಷಯದ ಅರಿವಾಗಿತ್ತು.ಇಂದಿನ ಯುವಪೀಳಿಗೆಗೆ ಇದರಿಂದ ಅದೆಷ್ಟೋ ವಿಚಾರಗಳು ತಿಳಿಯುವುದಿದೆ.

ಬೆಳಕರಿಯುವ ಮೊದಲೇ ಎದ್ದು,ನಿತ್ಯಕರ್ಮಗಳನ್ನು ಮುಗಿಸಿ, ಭಜನೆ ಹಾಗೆಯೇ ಯೋಗ ಮಾಡುವುದು, ಧ್ವಜಾರೋಹಣಣದಲ್ಲಿ ಭಾಗಿಯಾಗುವುದು, ಸೇವಾ ಯೋಜನೆಯ ಗೀತೆ ಹಾಡುವುದು, ಬೆಳಗ್ಗಿನ ವ್ಯಾಯಾಮ ಆಟೋಟ,ಶ್ರಮದಾನ,ಎಲ್ಲರೊಂದಿಗೆ ಬೆರೆಯುವುದು,ಒಂದೊಂದು ಗುಂಪು, ಗುಂಪಿಗೆ ದಿನಕ್ಕೊಂದು ಕರ್ತವ್ಯ, ಮಧ್ಯಾಹ್ನದ ಊಟದ ಜೊತೆಗೆ ಏನು ವಿಶೇಷ ಮಾಡಿದ್ದಾರೆಂಬ ಕಾತುರ,ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹಾಡು,ನೃತ್ಯ, ಪ್ರಹಸನಗಳಿಗೆ ತಯಾರಿ ನಡೆಸುವುದು,ಜೊತೆಗೆ ಹರಟೆ,ಕಾರ್ಯಕ್ರಮ ವೀಕ್ಷಣೆ, ರಾತ್ರಿಯ ಊಟದ ಬಳಿಕ ಚಿಂತನ – ಮಂಥನ.ಈ ದಿನಚರಿಯು ಅದೆಷ್ಟು ಖುಷಿಯೆಂಬುದು NSS ನ ಶಿಬಿರದಲ್ಲೊ ಭಾಗಿಯಾದವರಿಗಷ್ಟೇ ಗೊತ್ತು.ಅದರೊಂದಿಗೆ ನಮ್ಮಲ್ಲಿರುವ ಪ್ರತಿಭೆಗಳಿಗೆ ಒಂದೊಳ್ಳೆಯ ಉತ್ತಮ ವೇದಿಕೆಯೂ ಆಗಿದರ.ಹಾಗೆಯೇ ಶಿಬಿರ ನಡೆಯುವ ಊರಿನ ಜನಗಳ ಜೀವನಶೈಲಿ,ಅಲ್ಲಿನ ಗ್ರಾಮೀಣ ಬದುಕು,ಊರಿನವರೆಲ್ಲರ ಪ್ರೀತಿ – ಸಹಕಾರ,ಇವನ್ನೆಲ್ಲಾ ಪ್ರತೀ ಶಿಬಿರದಲ್ಲಿ ಪಾಲ್ಗೊಂಡಾಗ ಒಂದೊಳ್ಳೆ ಹೊಸ ಅನುಭವ ಖಂಡಿತ ಸಿಗುತ್ತದೆ.ಅಲ್ಲಿನ ಸಾಮಾಜಿಕ ಜೀವನದಲ್ಲಿ ಜನರಿಗೆ ಸ್ವಚ್ಛತೆಯ ಬಗೆಗೆ ಅರಿವು,ವೈದ್ಯಕೀಯ ಚಿಕಿತ್ಸಾ ಶಿಬಿರವನ್ನು ಏರ್ಪಡಿಸುವುದು,ಊರಿನ ಮನೆ – ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುವುದು ಹೀಗೆ ಹತ್ತು ಹಲವು.ಒಟ್ಟಾರೆಯಾಗಿ ಎನ್ಎಸ್ಎಸ್ ಕ್ಯಾಂಪ್ ಅಂತಂದ್ರೆ ಅದೊಂಥರಾ ಇಷ್ಟದ ನೆಂಟರ ಮನೆಯಿದ್ದಂತೆ.ಅಣ್ಣ- ತಂಗಿ ಅಕ್ಕ – ತಮ್ಮ ಅಂತ ಅಲ್ಲಿ ನಮ್ಮನ್ನು ಎಲ್ಲರೂ ಇಷ್ಟಪಡುವವರೇ ಆಗಿರುತ್ತಾರೆ.ಬದುಕಿನ ಅತ್ಯಮೂಲ್ಯ ದಿನಗಳನ್ನು ಈ ರೀತಿಯ ಶಿಬಿರಗಳಲ್ಲಿ ಕಳೆದವರೇ ಧನ್ಯರು.

ರಾಜಶ್ರೀ ಜೆ ಪೂಜಾರಿ

LEAVE A REPLY

Please enter your comment!
Please enter your name here