ಮರೆಯುವರೆಂತು ನಿಜ ಭಾರತೀಯರು ಈ ದಿನವ..
ರಾಷ್ಟ್ರದ ತುಂಬ ಶೌರ್ಯಖಹಳೆ ಮೊಳಗಿದ ಐತಿಹಾಸಿಕ ಕ್ಷಣವ..
ಸುಮ್ಮನಿದ್ದವರ ಕೆಣಕಿ ಕಟ್ಟವರಾದರು ಪಾಪಿ ಪಾಕಿಸ್ತಾನಿಯರು..
ಸುಮ್ಮನಿರಲಾರದೆ
ಕೆರಳಿ ಕೆಂಡವಾದರು ಭಾರತೀಯರು..
ಗಡಿಯ ಅತ್ತಿತ್ತಲು ಹೊತ್ತಿತು ಯುದ್ಧದ ಜ್ವಾಲೆ…
ಆರ್ಭಟಿಸಿದ್ದವು ಯುದ್ಧ ನೌಕೆಗಳು ಶಿಖರದ ಮೇಲೆ…
ಸಾಲುಸಾಲಾಗಿ ಸಾಗಿತು ಸೈನಿಕರ ಸೈನ್ಯ..
ಅಲ್ಯಾರೂ ಲೆಕ್ಕಿಸಲಿಲ್ಲ ತಮ್ಮ ಪ್ರಾಣ..
ಮೌನದ ಸದ್ದಡಗಿತು ಮದ್ದು ಗುಂಡುಗಳಿಂದ…
ನೆಲ ಬಿಸಿಯೇರಿತು ಸೈನಿಕರ ರಕ್ತಾಭಿಷೇಕದಿಂದ..
ಪಾಪಿಗಳು ಕಂಡಿರಲಿಲ್ಲ ಭಾರತೀಯರ ಆ ಪರಾಕ್ರಮ..
ಶತ್ರುಗಳ ಎದೆಯಮೇಲೆ ಅಂದು ಭಾರತೀಯನೇ ತ್ರಿವಿಕ್ರಮ..
ಹೆತ್ತ ತಾಯ ಮರೆತು ಹೊತ್ತ ತಾಯಿಗಾಗಿ ಜೀವನ್ನರ್ಪಿಸಿದರು..
ನಮ್ಮ ಹೆಮ್ಮೆಯ ನಮ್ಮ ಯೋಧರು..
ಬರಿದಾಗಿ ಕಿರಿದಾಯಿತು ಎದುರಾಳಿಯ ಸೈನ್ಯ..
ರಕ್ಷಿಸಿಯೇ ಬಿಟ್ಟರು ನಮ್ಮವರು ಭಾರತಾಂಭೆಯ ಮಾನ..
ರಕ್ತ ಪ್ರವಾಹದ ನಡುವೆ ನೆಟ್ಟರು ಭಾರತೀಯ ಧ್ವಜವ…
ತಮ್ಮ ದೇಶಕ್ಕಾಗಿ ಕೊಟ್ಟರು ಆ ಮೂಲಕ ತಮ್ಮ ಬುಜವ..
ಹರ್ಷದಿಂದ ಹರ್ಷಿತವಾಗಿತ್ತು ದೇಶ…
ಉಸಿರಿಲ್ಲದೆ ಉರುಳಿ ಬಿದ್ದಿದ್ದವವು ಅದೆಷ್ಟೋ ನಮ್ಮವರ ದೇಹ..
ಹರಿದಿತ್ತಂದು ನಾಡ ತುಂಬ ದೇಶಾಭಿಮಾನದ ಕೋಡಿ..
ತೆರೆದಿತ್ತಂದು ಯಾರೂ ಊಹಿಸಿರದ ಮೋಡಿ…
ನೋವಿನಲೂ ನಗುವ ಹೊತ್ತು ಬಂದಿದ್ದರು ನಮ್ಮವರು..
ಸಾವಿನಲೂ ಗೆಲುವ ತಂದಿದ್ದರು ನಮ್ಮ ಯೋಧರು..
ಶಿರಬಾಗಿ ನಮಿಸಿ ಆ ವೀರರ ನೆನೆದು ..
ಏಕೆಂದರೆ ಅಂದಿನ ಈ ಗೆಲುವು ನಮ್ಮದು…
ಮರೆಯಲೇ ಬಾರದು ನಾವವರ ಸೇವೆಯ..
ನಮಗಾಗಿಯೇ ನಿರಂತರ ಶ್ರಮಿಸುವ ಭಾರತೀಯ ಸೇನೆಯ…