ಹಳೆಯಂಗಡಿ: ಮಲೇರಿಯ, ಡೆಂಗ್ಯೂ, ಚಿಕನ್ ಗುನ್ಯ ಜ್ವರ ಹಾಗೂ ಇಲಿ ಜ್ವರ ತಡೆಗಟ್ಟುವ ಬಗ್ಗೆ ಕರಪತ್ರ ವಿತರಣೆ ಹಾಗೂ ಮಾಹಿತಿ ಕಾರ್ಯಕ್ರಮ

0
281
Tap to know MORE!

ಹಳೆಯಂಗಡಿ: ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ವತಿಯಿಂದ “ಮಲೇರಿಯ, ಡೆಂಗ್ಯೂ, ಚಿಕನ್ ಗುನ್ಯ ಜ್ವರ ಹಾಗೂ ಇಲಿ ಜ್ವರ ತಡೆಗಟ್ಟುವ ಬಗ್ಗೆ” ಕರಪತ್ರ ವಿತರಣೆ, ಸಾಮಾಜಿಕ ಜಾಲತಾಣ ಹಾಗೂ ಬ್ಯಾನರ್ ಹಾಕಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು.

ಹಳೆಯಂಗಡಿಯಲ್ಲಿ ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮ

ಮಳೆಗಾಲದ ಸಮಯದಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗಿ “ಮಲೇರಿಯ, ಡೆಂಗ್ಯೂ, ಚಿಕನ್ ಗುನ್ಯ ಜ್ವರ ಹಾಗೂ ಇಲಿ ಜ್ವರ” ಮುಂತಾದ ಮಾರಣಾಂತಿಕ ರೋಗ ಹರಡುವ ಬಗ್ಗೆ, ಮುಂಜಾಗ್ರತಾ ಕ್ರಮ, ತಡೆಗಟ್ಟುವ ವಿಧಾನಗಳ ಬಗ್ಗೆ ಇಲಾಖೆ ಪ್ರಕಟಿಸಿರುವ ಮಾಹಿತಿಯನ್ನು ಮುದ್ರಿಸಿ, ಕರಪತ್ರ ಪ್ರತಿ ಹಂಚಿಕೆ, ಸಾಮಾಜಿಕ ಜಾಲ ತಾಣಗಳ ಮೂಲಕ ಹಾಗೂ ಬ್ಯಾನರ್ ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವ ಸಾಮಾಜಿಕ ಕಾರ್ಯಕ್ರಮಕ್ಕೆ ದಿನಾಂಕ 29.06.2021 ರಂದು ಬೆಳಗ್ಗೆ 10 ಗಂಟೆಗೆ ಯುವಕ ಮಂಡಲದ ಪ್ರಾಂಗಣದಲ್ಲಿ ಚಾಲನೆ ನೀಡಲಾಯಿತು.

ನಿಮ್ಮ ಊರಿನ, ಸ್ಥಳೀಯ ಸುದ್ದಿಗಳನ್ನು ಸುದ್ದಿವಾಣಿಯಲ್ಲಿ ಪ್ರಕಟಿಸಲಾಗುವುದು. ಆದ ಜನ ಸ್ನೇಹಿ ಕಾರ್ಯಕ್ರಮಗಳ ವರದಿಯನ್ನು suddivani20@gmail.com ಗೆ mail ಮಾಡಿ

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಕರಪತ್ರವನ್ನು ಕಚೇರಿ, ಅಂಗಡಿಗಳು, ಮನೆಗಳಿಗೆ ಸದಸ್ಯರು ಹಂಚಿ ಹಾಗೂ ಬ್ಯಾನರ್ ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲು ಶ್ರಮಿಸಿಲಾಯಿತು.

ಗ್ರಾಮ ಪಂಚಾಯತ್ ಹಳೆಯಂಗಡಿ ಇದರ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶ್ರೀ ವಿನೋದ್ ಕುಮಾರ್ ಬೋಳ್ಳುರು, ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಹಳೆಯಂಗಡಿ ಇದರ ಸದಸ್ಯರು ಹಾಗೂ ಯುವಕ ಮಂಡಲದ ಸದಸ್ಯರು ಆಗಿರುವ ಶ್ರೀ ವಿನೋದ್ ಕುಮಾರ್ ಕೊಳುವೈಲು, ಶ್ರೀ ನಾಗರಾಜ್ ಪೂಜಾರಿ, ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಯತೀಶ್ ಕೋಟ್ಯಾನ್, ಉಪಾಧ್ಯಕ್ಷರಾದ ಶ್ರೀ ನಾಗೇಶ್ ಟಿ ಜಿ, ಸುವರ್ಣ ಮಹೋತ್ಸವ ಸಮಿತಿ ಇದರ ಕಾರ್ಯಧ್ಯಕ್ಷರಾದ ಶ್ರೀ ಸುಧಾಕರ ಆರ್ ಅಮೀನ್, ಯುವತಿ ಮಂಡಲದ ಅಧ್ಯಕ್ಷರಾದ ಕುಮಾರಿ ದಿವ್ಯಶ್ರೀ ರಮೇಶ್ ಕೋಟ್ಯಾನ್, ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ರೇಷ್ಮಾ ಅಶ್ರಫ್, ಯುವಕ ಮಂಡಲದ ಕಾನೂನು ಸಲಹೆಗಾರರು ಹಾಗೂ ವಕೀಲರಾದ ಶ್ರೀ ಚಂದ್ರಶೇಖರ ಜಿ. ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here