ಮಳೆಗಾಲದಲ್ಲಿ ಕಾಡುವ ಶೀತ, ಕೆಮ್ಮು, ಕಫಕ್ಕೆ ಹೇಳಿ ಗುಡ್ ಬೈ

0
150
Tap to know MORE!

ಮಳೆಗಾಲದಲ್ಲಿ, ಚಳಿ ವಾತಾವರಣದಲ್ಲಿ ಆಗಾಗ ಬರುವ ನೆಗಡಿ ಶೀತಕ್ಕೆ ತಲೆಕೆಡಿಸಬೇಕೆಂದಿಲ್ಲ. ಅಡುಗೆ ಮನೆಯಲ್ಲಿರುವ ಕೆಲ ಪದಾರ್ಥಗಳನ್ನು ಬಳಸುವುದರಿಂದಲೇ ನಾವು ಗುಣಮುಖರಾಗಬಹುದು.

  • ನಿಂಬೆ, ಕಲ್ಲು ಸಕ್ಕರೆ ಮತ್ತು ಕಾಳುಮೆಣಸನ್ನು ಸೇರಿಸಿ ಗಟ್ಟಿಯಾದ ಪಾಕವನ್ನು ಮಾಡಿಕೊಳ್ಳಬೇಕು. ಈ ಪಾಕವನ್ನು ದಿನವೂ 2 ಚಮಚ ಸೇವಿಸುತ್ತಾ ಬಂದರೆ ಕಫ ಕಡಿಮೆಯಾಗುವುದಲ್ಲದೇ ಕೆಮ್ಮಿನ ಸಮಸ್ಯೆ ದೂರವಾಗುತ್ತದೆ.
  • ಶುಂಠಿಯ ಚಹಾವನ್ನು ಮಾಡಿ ಕುಡಿಯುವುದರಿಂದ ಸಹ ನೆಗಡಿ ಮತ್ತು ಕಫವನ್ನು ನಿವಾರಿಸಿಕೊಳ್ಳಬಹುದು. ಈ ವೇಳೆ ಬ್ಲ್ಯಾಕ್ ಟೀ ಮಾಡಿಕೊಳ್ಳುವುದು ಉತ್ತಮ.
  • ಒಂದು ಲೋಟ ನೀರಿಗೆ ಶುಂಠಿ, ನಿಂಬೆ ರಸ, ಕಾಳು ಮೆಣಸು ಮತ್ತು ಬೆಲ್ಲವನ್ನು ಹಾಕಿ ಕುದಿಸಬೇಕು. ಇದನ್ನು ಬಿಸಿ ಆರುವ ಮುನ್ನವೇ ಕುಡಿಯುವುದರಿಂದ ನೆಗಡಿ ಮತ್ತು ಕಫ ಕಡಿಮೆಯಾಗುತ್ತದೆ.
  • ಬಿಸಿ ನೀರಿಗೆ ಉಪ್ಪನ್ನು ಸೇರಿಸಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ.
  • ಉಪ್ಪಿನ ಜೊತೆ ಶುಂಠಿ ಮತ್ತು ಲವಂಗವನ್ನು ಸೇರಿಸಿ ಅಗಿಯುವುದರಿಂದ ಕಫ ಮತ್ತು ಗಂಟಲ ಕೆರೆತವನ್ನು ದೂರ ಮಾಡಬಹುದು.
  • ಒಣ ಕೆಮ್ಮು ಇದ್ದರೆ ಏಲಕ್ಕಿ ಮತ್ತು ಶುಂಠಿ ಪುಡಿಯನ್ನು ಸೇರಿಸಿಕೊಂಡು ಸೇವಿಸುವುದು ಉತ್ತಮ.
  • ಹಾಗೆಯೇ ನೆಲ್ಲಿಕಾಯಿಯನ್ನು ಸೇವಿಸುತ್ತಿದ್ದರೆ ನೆಗಡಿ, ಕೆಮ್ಮು, ಕಫದ ಸಮಸ್ಯೆಯಿಂದ ದೂರವಿರಬಹುದು.
  • ಬಿಸಿ ಹಾಲಿಗೆ ಅರಿಶಿಣ ಮತ್ತು ಕಲ್ಲುಸಕ್ಕರೆಯನ್ನು ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿದರೂ ಕಫ ಮತ್ತು ನೆಗಡಿ ಕಡಿಮೆಯಾಗುತ್ತದೆ.
  • ಕೆಮ್ಮು ಉಂಟಾಗುವ ಸಂದರ್ಭದಲ್ಲಿ ಕಲ್ಲು ಸಕ್ಕರೆ ಮತ್ತು ಲವಂಗವನ್ನು ಸೇವಿಸಿದರೆ ಸಮಸ್ಯೆ ಕಡಿಮೆಯಾಗುತ್ತದೆ.
  • ಒಂದು ಚಮಚ ಜೇನುತುಪ್ಪಕ್ಕೆ ಅದರ ಕಾಲು ಭಾಗ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಸೇವಿಸಿದರೆ ಕಫದ ಸಮಸ್ಯೆಗೆ ಪರಿಹಾರ ಕಾಣಬಹುದು.

LEAVE A REPLY

Please enter your comment!
Please enter your name here