ಮಳೆಯಲಿ… ಜೊತೆಯಲಿ….

0
156
Tap to know MORE!

ಮಳೆ ನನ್ನ ಆತ್ಮೀಯ ಬಂಧು. ಮಳೆ ಎಂದಾಗ ಎಲ್ಲರಿಗೂ ನೆನಪಾಗುವುದು ಬಾಲ್ಯ. ಆದ್ರೆ ನನಗೆ ನೆನಪಾಗೋದು ನನ್ನ ಪ್ರೀತಿಯ ಪಯಣ. ಒಂದು ದಿನ ಬೆಳ್ಳಂ ಬೆಳಿಗ್ಗೆ ನನ್ನ ಪಯಣ ಜಾಗಿಂಗ್ ಕಡೆ ಮುಖ ಮಾಡಿತ್ತು… ಅದೇನೋ ಗೊತ್ತಿಲ್ಲ ಯಾವತ್ತೂ ಬೆಳಿಗ್ಗೆ ಸೋಮಾರಿತರ ಏಳೋ ನಾನು ಈ ದಿನ ಬೇಗ ಎದ್ದು ಹೆಡ್ಫೋನ್ ಹಾಕೊಂಡು ಏಕಾಂತದಿಂದ ಮಂಜಿನ ಹನಿಯ ಮುಗುಳ್ನಗೆಯೊಂದಿಗೆ, ಹಕ್ಕಿಯ ಇಂಪಾದ ಕಲರವದೊಂದಿಗೆ ನನ್ನ ಪಯಣ ಪ್ರಾರಂಭಿಸಿದೆ . ನೋಡಿ. ಅದೇನೋ ಗೊತ್ತಿಲ್ಲ ಕಣ್ರೀ ಸ್ವಲ್ಪ ದೂರ ತಲುಪುತ್ತಲೆ ಮತ್ತದೇ ಮಳೆ ಸೋ ಎಂದು ಸುರಿಯತೊಡಗಿತು … ಯಾರಿಗೆ ಹೇಳಿ ಮಳೆ ಅಂದ್ರೆ ಇಷ್ಟ ಆಗೋಲ್ಲ ಅದ್ರಲ್ಲೂ ನಮ್ಮಂತ ಹುಡುಗಿಯರಿಗೆ ಮಳೆ ಅಂದ್ರೆ ಏನೋ ಒಂಥರಾ ಖುಷಿ.. ಅದೇನೋ ಒಂದು ಸಂಬಂಧ .. ಅದೆಲ್ಲ ಬಿಡಿ ಎಷ್ಟು ಅಂಥ ಮಳೆ ಬಗ್ಗೆ ಹೇಳೋದು ನಮ್ ಲವ್ ಸ್ಟೋರಿ ಕಥೆಗೆ ಸ್ವಲ್ಪ ಎಂಟ್ರಿ ಆಗೋಣ ಅಲ್ವಾ….

ಈ ತರ ಮಳೆಗೂ ಅವನಿಗೂ ನನಗೂ ಬಿಡಿಸಲಾಗದ ನಂಟು. ಮೊದಲೇ ಮಳೆ ಎಂದರೆ ಹುಚ್ಚು ಪ್ರೀತಿ. ಅದೇನೋ ಗೊತ್ತಿಲ್ಲ ನನ್ನ ಕಿವಿಗೊಂದು ಸಣ್ಣ ಕವನ ನನ್ನ ಬೆನ್ನ ಹಿಂದೇನೆ ಹೇಳುವಂತೆ ಕೇಳಿಸ ತೊಡಗಿತ್ತು… ಆ ಕವನ ನಿಮಗು ಕೇಳ್ಬೇಕುಂತ ಆಸೆ ಇದ್ಯಾ ಕೇಳಿ ಹಾಗಾದ್ರೆ…

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

“ನಾ ನೆನೆದೆ ಅವಳೊಂದಿಗೆ…ಭಾವನೆಯ ಮಳೆಯೊಂದಿಗೆ…ಚುಂಬಿಸಿ ಬಿಡುವೆ ನಿನ್ನ ತುಟಿಯನ್ನು.. ಹಿಡಿದೇ ಬಿಡುವೆ ನಿನ್ನ ಕೈಗಳನ್ನು … ಗೆಳತಿ ನೆನೆವೆ ನಿನ್ನೊಂದಿಗೆ ಮಳೆಯಲಿ… ಬೆರೆವೆ ನಿನ್ನ ಒಲವಿನೊಂದಿಗೆ… ನಿನ್ನ ಸೌಂದರ್ಯವ ವರ್ಣಿಸಲು ಸಾಧ್ಯವಿಲ್ಲ… ಆದರೆ ನಿನ್ನ ವರ್ಣಿಸುವೆ ಮದುವೆಯಾದ ಬಳಿಕ”… ಹುಫ್ ಇದ್ಯಾರಪ್ಪಾ ಇತರ ಕವನ ಹೇಳ್ತಿರೋದು ಎಂದು ತಿರುಗಿ ನೋಡುವಷ್ಟರಲ್ಲಿ ನನ್ನ ಅವನು ತಬ್ಬಿಕೊಂಡು ಹಣೆಗೆ ಮುತ್ತನು ಕೊಟ್ಟೆ ಬಿಟ್ಟ… ಹೆದರಿದ ನಾನು ಆ ಸಮಯದಿ ಮೂರ್ಛೆ ರೂಪಕ್ಕೆ ಜಾರಿದೆ ಬೆಳಗೆದ್ದು ನೋಡ್ವಾಗ ನನ್ನನು ತಬ್ಬಿಕೊಂಡು ಮಲಗಿದವ ನನ್ನ ಪ್ರೀತಿಯ ರಗ್ಗು ನೋಡಿ…

ಲೈನ್ ಮ್ಯಾನ್‌ಗಳಿಗೆ ಶಾಪ ಹಾಕುವ ಮುನ್ನ…

ಕೇಳಿದ್ರಲ್ಲ ಈಗ ಅಂತೂ ಇಂತೂ ನೀವು ನನ್ನ ಲವ್ ಸ್ಟೋರಿನ.. ಇದು ನನ್ನ ಮಳೆಗಾಲದ ಲವ್ ಸ್ಟೋರಿ…. ಆದ್ರೆ ಇದು ಬೆಡ್ಶೀಟ್ ಸ್ಟೋರಿ ಆಗೋ ಬದ್ಲು ಅವ್ನೆ ಬರ್ತಿದ್ರೆ ಎಷ್ಟು ಖುಷಿ ಅಲ್ವಾ… ಅಂತ ಪುಣ್ಯಾತ್ಮ ಯಾವಾಗ ಸಿಕ್ತಾನೋ ಏನೋ… ಇರ್ಲಿ ಬಿಡಿ..

ಇಂಚರ ಗೌಡ
ಆಳ್ವಾಸ್ ಕಾಲೇಜು ಮೂಡುಬಿದಿರೆ

LEAVE A REPLY

Please enter your comment!
Please enter your name here