ಬಹಳಷ್ಟು ವಿಜ್ಞಾನಿಗಳು ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಔಷಧಿಯನ್ನು ಹುಡುಕುತ್ತಿದ್ದಾರೆ. ರೋಗದಿಂದ ಮುಕ್ತರಾಗಲು ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಇದರ ಮಧ್ಯೆ, ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಂಸದರೊಬ್ಬರು ನೀಡಿರುವ ಹೇಳಿಕೆ ಸಖತ್ ವೈರಲ್ ಆಗಿದೆ!
ಮುಸ್ಲಿಮರಿಗೆ ಮಸೀದಿಗಳಿಗೆ ತೆರಳಿ ನಮಾಜ್ ಮಾಡಲು ಅವಕಾಶ ಮಾಡಿ ಕೊಟ್ಟರೆ ಮಾತ್ರ ಕೊರೊನಾ ನಿಯಂತ್ರಣಕ್ಕೆ ಬರುತ್ತದೆ ಎಂದು ಸಂಸದ ಶಫಿಕರ್ ರೆಹಮಾನ್ ಹೇಳಿದ್ದಾರೆ.
ಆಗಸ್ಟ್ 12ರಂದು ನಡೆಯಲಿರುವ ಬಕ್ರೀದ್ ಹಬ್ಬದ ನಿಮಿತ್ತ ಮಾರುಕಟ್ಟೆಗಳನ್ನೆಲ್ಲ ತೆರೆಯಬೇಕು. ಬಕ್ರೀದ್ ಗೂ ಮುಂಚಿತವಾಗಿ ಮಾರುಕಟ್ಟೆಗಳು ತೆರೆಯಬೇಕು. ಆಗ ನಮಗೂ ಕುರಿಗಳನ್ನು ಖರೀದಿಸಲು ಸುಲಭವಾಗುತ್ತದೆ. ಈದ್ ಸಂದರ್ಭದಲ್ಲಿ ದಿನಕ್ಕೆ ಎರಡು ಬಾರಿ ನಮಾಜ್ ಮಾಡಬೇಕಾಗುತ್ತದೆ. ಹಾಗಾಗಿ ಕೂಡಲೇ ಮಸೀದಿಗಳನ್ನು ತೆರೆಯಲು ಅವಕಾಶ ನೀಡಬೇಕು. ನಾವೂ ಕೂಡ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ, ಕೊರೊನಾ ವೈರಸ್ ನಿಂದ ದೇಶವನ್ನು ಮುಕ್ತಗೊಳಿಸುವಂತೆ ಬೇಡಿಕೊಳ್ಳುತ್ತೇವೆ. ನಮ್ಮ ಪ್ರಾರ್ಥನೆಯನ್ನು ಖಂಡಿತ ದೇವರು ಕೇಳುತ್ತಾನೆ. ಕೊರೊನಾ ನಿಯಂತ್ರಣಕ್ಕೆ ಬಂದು ಪರಿಸ್ಥಿತಿ ಸುಧಾರಿಸುತ್ತದೆ ಎಂದಿದ್ದಾರೆ.