ಮಹತ್ವದ ಯೋಜನೆಗಳನ್ನು ಜನತೆಯ ಮುಂದಿಟ್ಟ ಪ್ರಧಾನಿ ಮೋದಿ

0
155
Tap to know MORE!

ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ, ಕೋವಿಡ್ -19 ವಿರುದ್ಧದ ಯುದ್ಧದಲ್ಲಿ ಭಾರತ ಇನ್ನೂ ಸ್ಥಿರ ಸ್ಥಿತಿಯಲ್ಲಿದೆ. ಸಮಯೋಚಿತ ನಿರ್ಧಾರಗಳು ಮತ್ತು ಕ್ರಮಗಳು ಉತ್ತಮ ಪಾತ್ರ ವಹಿಸಿವೆ ಎಂದು ಪ್ರಧಾನಿ ಮೋದಿ ಹೇಳಿದರು

ದೇಶವನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ನಾವು ಅನ್ಲಾಕ್ 2.0 ಅನ್ನು ಪ್ರವೇಶಿಸುತ್ತಿದ್ದೇವೆ ಮತ್ತು ಕೆಮ್ಮು, ಜ್ವರ ಮತ್ತು ಶೀತದ ಋತುಮಾನವೂ ಪ್ರಾರಂಭವಾಗಲಿದೆ. ಅಂತಹ ಪರಿಸ್ಥಿತಿಯಲ್ಲಿ, ತಮ್ಮನ್ನು ತಾವು ನೋಡಿಕೊಳ್ಳಬೇಕೆಂದು ನಾನು ದೇಶವಾಸಿಗಳನ್ನು ಕೋರುತ್ತೇನೆ. “ನಾವು ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ತರಲು ಯೋಜಿಸುತ್ತಿದ್ದೇವೆ. ಈಗ ಇಡೀ ಭಾರತಕ್ಕೆ ಪಡಿತರ ಚೀಟಿ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ದೊಡ್ಡ ಲಾಭವೆಂದರೆ ತಮ್ಮ ಗ್ರಾಮವನ್ನು ತೊರೆದು ಉದ್ಯೋಗಕ್ಕಾಗಿ ಅಥವಾ ಇನ್ನಿತರ ಸ್ಥಳಗಳಿಗೆ ಹೋಗುವ ಬಡ ಸಹೋದ್ಯೋಗಿಗಳಿಗೆ ಸಹಾಯವಾಗಲಿದೆ, ”ಎಂದು ಪ್ರಧಾನಿ ಮೋದಿ ಘೋಷಿಸಿದರು.

ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ, 20 ಕೋಟಿ ಖಾತೆಗಳು ತಮ್ಮ ಜನ ಧನ್ ಖಾತೆಗಳಲ್ಲಿ 31,000 ಕೋಟಿ ರೂಪಾಯಿಗಳನ್ನು ಪಡೆದಿವೆ. ಈ ಸಮಯದಲ್ಲಿ, 9 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಲ್ಲಿ 18 ಸಾವಿರ ಕೋಟಿ ರೂಪಾಯಿಗಳನ್ನು ಜಮಾ ಮಾಡಲಾಗಿದೆ ಎಂದರು.

“ಮಳೆಗಾಲದಲ್ಲಿ ಮತ್ತು ನಂತರದಲ್ಲಿ ಮುಖ್ಯವಾಗಿ ಕೃಷಿ ಕ್ಷೇತ್ರದಲ್ಲಿ ನಮಗೆ ಹೆಚ್ಚಿನ ಕೆಲಸವಿದೆ. ಇತರ ಕ್ಷೇತ್ರಗಳಲ್ಲಿ ಸ್ವಲ್ಪ ನಿಧಾನಗತಿಯಿದೆ. ಕ್ರಮೇಣ, ಹಬ್ಬಗಳ ವಾತಾವರಣವು ಜುಲೈನಿಂದ ಆರಂಭವಾಗುತ್ತದೆ. ಈ ಹಬ್ಬಗಳ ಸಮಯವು ಅಗತ್ಯ ವೆಚ್ಚಗಳನ್ನು ಹೆಚ್ಚಿಸುತ್ತದೆ. ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಅನ್ನ್ ಯೋಜನೆಯನ್ನು ದೀಪಾವಳಿ ವರೆಗೆ ಅಂದರೆ ನವೆಂಬರ್ ಅಂತ್ಯದ ವರೆಗೆ ವಿಸ್ತರಿಸಲಾಗುವುದು ಎಂದು ಮೋದಿ ಹೇಳಿದರು. ಅನ್ಲಾಕ್ 1 ಕೆಲವು ಜನರು ತಮ್ಮ ನಿರ್ಲಕ್ಷ್ಯ ತೋರಿದ ಕಾರಣ ಪರಿಸ್ಥಿತಿ ಉಲ್ಬಣವಾಗಿದೆ. ಈ ಸಮಯದಲ್ಲಿ ನಾವು ಇನ್ನಷ್ಟು ಜಾಗರೂಕರಾಗಿರಬೇಕು ದಯವಿಟ್ಟು ಜಾಗೃತರಾಗಿ ಎಂದು ವಿನಂತಿಸಿದರು

LEAVE A REPLY

Please enter your comment!
Please enter your name here