ಮಹಾರಾಷ್ಟ್ರದಲ್ಲಿ ೧ ಲಕ್ಷ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ!

0
152
Tap to know MORE!

ಕಳೆದ 24 ಗಂಟೆಗಳಲ್ಲಿ ಸುಮಾರು 3,500 ಹೊಸ ಕೊರೊನವೈರಸ್ ಪ್ರಕರಣಗಳನ್ನು ದಾಖಲಾಗಿದ್ದರಿಂದ, ಮಹಾರಾಷ್ಟ್ರ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ೧ ಲಕ್ಷ ಗಡಿ ದಾಟಿತು. ರಾಜ್ಯದ ಆರೋಗ್ಯ ಇಲಾಖೆಯ ಪ್ರಕಾರ ಇಂದು ರಾಜ್ಯದಲ್ಲಿ ಒಟ್ಟು 3,4,14 ಪ್ರಕರಣಗಳು ವರದಿಯಾಗಿದ್ದವು.

ಮಹಾರಾಷ್ಟ್ರದಲ್ಲಿರುವ ಒಟ್ಟು ಸೋಂಕಿತರ ಸಂಖ್ಯೆಯು ಚೀನಾ ಮತ್ತು ಕೆನಡಾ ಸೇರಿದಂತೆ ಪ್ರಪಂಚದ ಇತರ ದೇಶಗಳ ಒಟ್ಟು ಕೊವಿಡ್ -19 ಸೋಂಕಿತರಿಗಿಂತ ಹೆಚ್ಚಾಗಿದೆ. ಅದರ ಜೊತೆಗೆ, ರಾಜ್ಯದಲ್ಲಿ ಸಾವಿನ ಸಂಖ್ಯೆಯು 3,717 ತಲುಪಿದೆ.
ಹೀಗಿದ್ದರೂ, ಒಟ್ಟು 47,793 ಸೋಂಕಿತರು ಕೊವಿಡ್ -19 ಸೋಂಕಿನಿಂದ ಪೂರ್ಣ ಚೇತರಿಕೆ ಕಂಡು, ಬಿಡುಗಡೆ ಆಗಿದ್ದಾರೆ. ರಾಜ್ಯ ರಾಜಧಾನಿ, ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ 1,366 ಹೊಸ ಕೊವಿಡ್ -19 ಸೋಂಕಿತರ ವರದಿ ಆಗಿದೆ. ಇದರಿಂದ ಮುಂಬೈಯೊಂದರಲ್ಲೇ ಸೋಂಕಿತರ ಸಂಖ್ಯೆ 55,451 ಕ್ಕೆ ಏರಿಕೆಯಾಗಿದೆ. ಇವುಗಳ ಪೈಕಿ, ಮುಂಬೈಯ ಧಾರಾವಿಯಲ್ಲಿ ಕೊರೊನವೈರಸ್ ಪ್ರಕರಣಗಳ ಸಂಖ್ಯೆ 29 ಹೊಸ ರೋಗಿಗಳನ್ನು ಸೇರಿಸಿ, 2,000 ಗಡಿಯನ್ನು ದಾಟಿದೆ.

LEAVE A REPLY

Please enter your comment!
Please enter your name here