ಮಹಾರಾಷ್ಟ್ರ: ಕನ್ನಡದಲ್ಲಿ ಬೋಧನೆ ಮಾಡುತ್ತಿದ್ದ ಶಿಕ್ಷಕನಿಗೆ ಅಂತರರಾಷ್ಟ್ರೀಯ ಪ್ರಶಸ್ತಿ!

0
135
Tap to know MORE!

ಮುಂಬೈ: ಕರ್ನಾಟಕದ ಗಡಿಭಾಗವಾದ, ಕನ್ನಡಿಗರು ಬಹುಸಂಖ್ಯಾತರಾಗಿರುವ ಮಹಾರಾಷ್ಟ್ರದ ಸೊಲ್ಲಾಪುರದ ಪರಿತೆವಾಡಿ ಜಿಲ್ಲಾ ಪಂಚಾಯತ್ ಪ್ರಾಥಮಿಕ ಶಾಲೆಯ ಶಿಕ್ಷಕ ರಂಜಿತ್​ಸಿಂಹ ದಿಸಾಳೆ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಲಂಡನ್​ನ ನ್ಯಾಚುರಲ್ ಮ್ಯೂಸಿಯಂ ಆಫ್ ಹಿಸ್ಟರಿಯಲ್ಲಿ ಆಯೋಜಿಸಲಾಗಿದ್ದ ವರ್ಚುವಲ್ ಕಾರ್ಯಕ್ರಮದಲ್ಲಿ ಗ್ಲೋಬಲ್ ಟೀಚರ್ಸ್ ಅವಾರ್ಡ್ ಘೋಷಣೆ ಮಾಡಲಾಗಿದೆ. ಪ್ರಶಸ್ತಿ 7.37 ಕೋಟಿ ರೂ. ಒಳಗೊಂಡಿದೆ.

ರಂಜಿತ್ ಸಿಂಹ ಕ್ವಿಕ್ ರೆಸ್ಪಾನ್ಸ್ ಕೋಡ್ (ಕ್ಯೂಆರ್ ಕೋಡ್) ಮೂಲಕ ಶಿಕ್ಷಣದಲ್ಲಿ ಕ್ರಾಂತಿ ಮೂಡಿಸಿದ ಖ್ಯಾತಿ ಪಡೆದಿದ್ದಾರೆ. ಕೋವಿಡ್ ಸಮಯದಲ್ಲಿ ಆನ್​ಲೈನ್ ಶಿಕ್ಷಣ ಅನಿವಾರ್ಯವಾದಾಗ ಸರ್ಕಾರಿ ಶಾಲೆ ಮಕ್ಕಳಿಗೆ ಡಿಜಿಟಲ್ ಶಿಕ್ಷಣ ದೊರೆಯುವಂತೆ ನೋಡಿಕೊಂಡರು. ಒಂದರಿಂದ ನಾಲ್ಕನೇ ತರಗತಿವರೆಗಿನ ಎಲ್ಲ ಪಠ್ಯಗಳನ್ನು ಕ್ಯೂಆರ್ ಕೋಡ್​ಗೆ ಪರಿವರ್ತಿಸಿ ವಿದ್ಯಾರ್ಥಿಗಳು ಮೊಬೈಲ್​ನಲ್ಲಿಯೇ ಓದುವಂತೆ ವ್ಯವಸ್ಥೆ ಮಾಡಿದರು.

ಇದನ್ನೂ ಓದಿ: 15 ವರ್ಷದ ಇಂಡೋ-ಅಮೇರಿಕನ್ ಗೀತಾಂಜಲಿ ರಾವ್ ಟೈಮ್ಸ್ “ಕಿಡ್ ಆಫ್ ದ ಇಯರ್” ಆಗಿ ಆಯ್ಕೆ

ಸೊಲ್ಲಾಪುರ ಕನಾಟಕದ ಗಡಿಭಾಗವಾದ್ದರಿಂದ ಇಲ್ಲಿ ಕನ್ನಡಿಗರೇ ಹೆಚ್ಚು. ಹೀಗಾಗಿ ಈ ಮಕ್ಕಳಿಗಾಗಿ ಕನ್ನಡ ಕಲಿತು, ಕನ್ನಡದಲ್ಲಿಯೇ ಬೋಧನೆ ಮಾಡಿದರು. ಗ್ರಾಮಸ್ಥರ ಮನಗೆದ್ದು ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮಾಡಿದರು. ಇದಕ್ಕಾಗಿ ಈ ಹಿಂದೆಯೇ ಇವರಿಗೆ 2016 ಹಾಗೂ 2018ರಲ್ಲಿ ನಾವೀನ್ಯತಾ ಸಂಶೋಧಕ ಪ್ರಶಸ್ತಿ ಸಂದಿವೆ. ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾಡೆಲ್ಲ ಕೂಡ ರಂಜಿತ್ ಸಿಂಹ ಕಾರ್ಯವೈಖರಿಯನ್ನು ಪ್ರಶಂಸಿಸಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here