ವಿಶ್ವ ಸಂಸ್ಥೆಯಲ್ಲಿ ಚೀನಾಗೆ ಹಿನ್ನಡೆ – ಯುಎನ್ ಮಹಿಳಾ ಆಯೋಗದ ಸದಸ್ಯರಾಗಿ ಆಯ್ಕೆಯಾದ ಭಾರತ

0
209
Tap to know MORE!

ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರೂಮೂರ್ತಿ, ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ (ಇಕೋಸೊಕ್) ಸಂಸ್ಥೆಯಾದ ಯುನೈಟೆಡ್ ನೇಷನ್ಸ್ ಕಮಿಷನ್ ಆನ್ ಸ್ಟೇಟಸ್ ಆಫ್ ವುಮೆನ್ (ಯುಎನ್‌ಸಿಎಸ್‌ಡಬ್ಲ್ಯು) ಸದಸ್ಯರಾಗಿ ಭಾರತವನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ರಾಯಭಾರಿ ತಿರುಮೂರ್ತಿ ಅವರು ಈ ಕುರಿತಂತೆ ಟ್ವೀಟ್ ಮಾಡಿದ್ದು, “ಭಾರತವು ಪ್ರತಿಷ್ಠಿತ ಇಕೋಸೊಕ್‌ ಸ್ಥಾನವನ್ನು ಪಡೆದಿದೆ! ಮಹಿಳಾ ಆಯೋಗದ (ಸಿಎಸ್‌ಡಬ್ಲ್ಯು) ಸದಸ್ಯರಾಗಿ ಭಾರತ ಆಯ್ಕೆಯಾಗಿದೆ. ಇದು ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣವನ್ನು ಉತ್ತೇಜಿಸುವ ನಮ್ಮ ಬದ್ಧತೆಗೆ, ನಮ್ಮ ಎಲ್ಲ ಪ್ರಯತ್ನಗಳಿಗೆ ಸಿಕ್ಕ ಅನುಮೋದನೆಯಾಗಿದೆ. ಸದಸ್ಯ ರಾಷ್ಟ್ರಗಳು ನೀಡಿದ ಬೆಂಬಲಕ್ಕೆ ಧನ್ಯವಾದಗಳು ” ಎಂದಿದ್ದಾರೆ.

2021 ರಿಂದ 2025 ರವರೆಗೆ ಭಾರತವು ನಾಲ್ಕು ವರ್ಷಗಳ ಕಾಲ ಯುಎನ್‌ಸಿಎಸ್‌ಡಬ್ಲ್ಯೂ ಸದಸ್ಯವಾಗಿರಲಿದೆ.

ಮಹಿಳೆಯರ ಆಯೋಗ (ಸಿಎಸ್‌ಡಬ್ಲ್ಯು ಅಥವಾ ಯುಎನ್‌ಸಿಎಸ್‌ಡಬ್ಲ್ಯು) ವಿಶ್ವಸಂಸ್ಥೆಯ ಪ್ರಮುಖ ಅಂಗಗಳಲ್ಲಿ ಒಂದಾದ ಇಕೋಸೊಕ್‌ನ ಕ್ರಿಯಾತ್ಮಕ ಆಯೋಗವಾಗಿದೆ. ಯುಎನ್‌ಸಿಎಸ್‌ಡಬ್ಲ್ಯೂ ಅನ್ನು ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣವನ್ನು ಉತ್ತೇಜಿಸುವ ವಿಶ್ವ ಸಂಸ್ಥೆಯ ಅಂಗ ಎಂದು ಕರೆಯಲಾಗುತ್ತದೆ.

ಭಾರತ, ಚೀನಾ ಮತ್ತು ಅಫ್ಘಾನಿಸ್ತಾನವು ಯುಎನ್‌ಸಿಎಸ್‌ಡಬ್ಲ್ಯೂ ಕುರಿತು ಆಯೋಗಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. 54 ಸದಸ್ಯರಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ಉತ್ತಮ ಮತಗಳನ್ನು ಪಡೆಯಿತು. ಆದರೆ ಚೀನಾಕ್ಕೆ ಅರ್ಧ ದಾರಿಯನ್ನು ದಾಟಲು ಸಾಧ್ಯವಾಗಲಿಲ್ಲ.

ಭಾರತವು ಎಂಟನೇ ಬಾರಿಗೆ ಯುಎನ್‌ಎಸ್‌ಸಿಗೆ ಆಯ್ಕೆಯಾಗಿದೆ. ಭಾರತವು ಈ ಮೊದಲು ಏಳು ಬಾರಿ ಸೇವೆ ಸಲ್ಲಿಸಿದೆ: 1950-1951, 1967-1968, 1972-1973, 1977-1978, 1984-1985, 1991-1992 ಮತ್ತು 2011-2012.

ಭಾರತವು ಏಷ್ಯಾ-ಪೆಸಿಫಿಕ್ ಗ್ರೂಪ್ (ಎಪಿಜಿ) ಯಲ್ಲಿ ಏಕೈಕ ಅಭ್ಯರ್ಥಿಯಾಗಿದ್ದು, 2021 ರ ಜನವರಿಯಿಂದ ಒಂದು ದಶಕದ ನಂತರ ಪರಿಷತ್ತಿಗೆ ಮರಳಿತು. ಯುಎನ್‌ಎಸ್‌ಸಿಯಲ್ಲಿ ಭಾರತ ಕೊನೆಯ ಬಾರಿಗೆ ಸೇವೆ ಸಲ್ಲಿಸಿದ್ದು 2011 ಮತ್ತು 2012 ರ ನಡುವೆ.

LEAVE A REPLY

Please enter your comment!
Please enter your name here