ದೇಶದ ಮೊದಲ ಮಹಿಳಾ ಹೃದ್ರೋಗ ತಜ್ಞ ಕೊರೋನಾಗೆ ಬಲಿ!

0
210
Tap to know MORE!

ಭಾರತದ ಮೊದಲ ಮಹಿಳಾ ಹೃದ್ರೋಗ ತಜ್ಞ ಡಾ.ಎಸ್. ಪದ್ಮಾವತಿ ಅವರು ಆಗಸ್ಟ್ 29 ರಂದು ನ್ಯಾಷನಲ್ ಹಾರ್ಟ್ ಇನ್ಸ್ಟಿಟ್ಯೂಟ್ನಲ್ಲಿ ಕೋವಿಡ್-19 ನಿಂದ ನಿಧನರಾದರು. “ಗಾಡ್‌ಮದರ್ ಆಫ್ ಕಾರ್ಡಿಯಾಲಜಿ ಎಂದು ಪ್ರಸಿದ್ಧವಾಗಿರುವ ಮಹಿಳಾ ಹೃದ್ರೋಗ ತಜ್ಞ ಡಾ. ಎಸ್. ಪದ್ಮಾವತಿ ಆಗಸ್ಟ್ 29 ರಂದು COVID-19 ಸೋಂಕಿನಿಂದ ನಿಧನರಾದರು “ಎಂದು ಎನ್ಎಚ್ಐ ಆಗಸ್ಟ್ 30 ರಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಭಾರತದಲ್ಲಿ ಹೃದ್ರೋಗ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ, ಡಾ|ಪದ್ಮಾವತಿಗೆ ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಮತ್ತು ಎಫ್‌ಎಎಂಎಸ್‌ನ ಫೆಲೋಶಿಪ್ ನೀಡಲಾಯಿತು. ಭಾರತ ಸರ್ಕಾರವು ಕ್ರಮವಾಗಿ 1967 ಮತ್ತು 1992 ರಲ್ಲಿ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪುರಸ್ಕಾರವನ್ನು ಪ್ರದಾನ ಮಾಡಿತು.

ಪದ್ಮಾವತಿ 1917 ರಲ್ಲಿ ಸ್ಪ್ಯಾನಿಷ್ ಸಾಂಕ್ರಾಮಿಕ ರೋಗ ಹರಡುವ ಒಂದು ವರ್ಷದ ಮೊದಲು ಬರ್ಮಾದಲ್ಲಿ ಜನಿಸಿದರು (ಈಗ ಮ್ಯಾನ್ಮಾರ್ ಎಂದು ಕರೆಯುತ್ತಾರೆ). 1918 ರ ಸಾಂಕ್ರಾಮಿಕ ರೋಗವು ಮಾನವ ಇತಿಹಾಸದಲ್ಲಿ ಅತ್ಯಂತ ಮಾರಕವೆಂದು ಭಾವಿಸಲ್ಪಟ್ಟಿದೆ. ವಿಶ್ವದಾದ್ಯಂತ ಕನಿಷ್ಠ 50 ಮಿಲಿಯನ್ ಜನರನ್ನು ಬಲಿ ಪಡೆದಿತ್ತು.

LEAVE A REPLY

Please enter your comment!
Please enter your name here