“ಮಹಿಳೆಯರ ರಕ್ಷಣೆ ಮತ್ತು ಸಮಾನತೆ”: ಬೀದಿನಾಟಕ ಸ್ಪರ್ಧೆ

0
165
Tap to know MORE!

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಮಹಿಳೆಯರ ರಕ್ಷಣೆ ಮತ್ತು ಸಮಾನತೆಯ ಕುರಿತು ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಬೀದಿನಾಟಕ ಸ್ಪರ್ಧೆ ಏರ್ಪಡಿಸಲಾಗಿತ್ತು.

ಸ್ಪರ್ಧೆಯಲ್ಲಿ ತುಳು ಪೋರಂ, ಕಾಮರ್ಸ್ ಪೋರಂನ ಎರಡು ತಂಡಗಳು, ಎನ್‌ಸಿಸಿ ಆರ್ಮಿ ವಿಂಗ್, ಎನ್‌ಸಿಸಿ ನೇವಿ ಪೋರಂ, ಕನ್ನಡ ಪೋರಂ, ಆರು ತಂಡಗಳು ಭಾಗವಹಿಸಿದ್ದವು.

ಇದನ್ನೂ ಓದಿ: ಕೋಟಿ ಚೆನ್ನಯಯರು ತುಳುವರ ಅಸ್ಮಿತೆ: ಆಳ್ವಾಸ್ ನಲ್ಲಿ ಕಥಾವಲೋಕನ ‌‌

ಪ್ರಥಮ ಬಹುಮಾನ ಎನ್‌ಸಿಸಿ ಆರ್ಮಿ ತಂಡ ಪಡೆದರೆ, ದ್ವಿತೀಯ ಬಹುಮಾನವನ್ನು ಎನ್‌ಸಿಸಿ ನೇವಿ ತಂಡ ಹಾಗೂ ತೃತೀಯ ಬಹುಮಾನವನ್ನು ತುಳು ಪೋರಂ ಪಡೆಯಿತು.

ವಾಣಿಜ್ಯ ಪ್ರೋಫೆಶನಲ್ ವಿಭಾಗದ ಸಂಯೋಜಕರಾದ ಅಶೋಕ್ ಕೆ.ಜಿ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕರಾದ ಪ್ರಸಾದ್ ಶೆಟ್ಟಿ ತೀರ್ಪುಗಾರಾಗಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯೋಜಕರಾದ ವಸಂತ್ ಹಾಗೂ ವಿನೋದ್ ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ಸುದೀಕ್ಷಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here