ಮಹಿಳೆಯೋರ್ವರಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಯ ತಂದೆ ಹತ್ರಾಸ್ ಸಂತ್ರಸ್ತೆಗಾದ ದೌರ್ಜನ್ಯದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿ..!

0
196
Tap to know MORE!

ಹೈದರಾಬಾದಿನಲ್ಲಿ ದಲಿತ ಯವತಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆಂದ್ರ ಪೋಲೀಸರು ದಕ್ಷಿಣ ಕನ್ನಡದ ಪುತ್ತೂರಿನ ಎಸ್.ಡಿ.ಪಿ.ಐ ಕಾರ್ಮಿಕ ಸಂಘದ ಮಾಜಿ ತಾಲೂಕು ಅಧ್ಯಕ್ಷನ ಮಗನನ್ನು ಬಂಧಿಸಿದ್ದಾರೆ. ಆಂಧ್ರ ಪ್ರದೇಶದ ದಲಿತ ಯುವತಿಯ ಜೊತೆ ದೈಹಿಕ ಸಂಬಂಧ ಬೆಳೆಸಿ, ಬಳಿಕ ಆಕೆಯ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಕೆ ಒಡ್ಡಿದ ಆರೋಪದ ಮೇರೆಗೆ ಪುತ್ತೂರಿನ ಎಸ್.ಡಿ.ಪಿ.ಐ ಕಾರ್ಮಿಕ ಮುಖಂಡ ಹಮೀದ್ ಸಾಲ್ಮರ ಅವರ ಮಗ ಮಹಮ್ಮದ್ ಫೈಝಲ್ (24) ಎಂಬಾತನನ್ನು ಆಂಧ್ರ ಪ್ರದೇಶ ಪೋಲೀಸರು ಬಂಧಿಸಿದ್ದಾರೆ

ಬಂಧನದ ಮರುದಿನವೇ ಆರೋಪಿಯ ತಂದೆ ಹಮೀದ್ ಸಾಲ್ಮರ ಉತ್ತರಪ್ರದೇಶದ ಹತ್ರಾಸ್ ನಲ್ಲಿ ದಲಿತ ಯುವತಿಯ ಹತ್ಯೆಯ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಉತ್ತರಪ್ರದೇಶದ ದಲಿತ ಯುವತಿಯ ಮೇಲಾದ ದೌರ್ಜನ್ಯ ಖಂಡಿಸಿ ಎಸ್.ಡಿ.ಪಿ.ಐ ಪ್ರತಿಭಟನೆಯಲ್ಲಿ ಈತ ಭಾಗವಹಿಸಿರುವುದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಮನೆಯಲ್ಲಿ ದಲಿತ ಯುವತಿಗೆ ಲೈಂಗಿಕ ದೌರ್ಜನ್ಯ ಎಸಗಿದ ಮಗನನ್ನು ಇರಿಸಿಕೊಂಡು, ದಲಿತ ಯುವತಿಯ ಅನ್ಯಾಯದ ಬಗ್ಗೆ ಪ್ರತಿಭಟಿಸುವ ನೈತಿಕತೆಯ ಕುರಿತೂ ಚರ್ಚೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here