SURVEY: ದೇಶದ ಶೇ.60ರಷ್ಟು ಮಹಿಳೆಯರು ಇದುವರೆಗೆ ಇಂಟರ್ನೆಟ್ ಬಳಕೆ ಮಾಡಿಲ್ಲ!

0
85
Tap to know MORE!

ನವದೆಹಲಿ ಡಿ.16: ದೇಶದಲ್ಲಿ ದಿನೇ ದಿನೆ ಇಂಟರ್ನೆಟ್ ಬಳಕೆದಾರರ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಈ ನಡುವೆ ಅಚ್ಚರಿಯ ಅಂಶವೊಂದು ಬೆಳಕಿಗೆ ಬಂದಿದ್ದು, ದೇಶದಲ್ಲಿ ಶೇ.60ರಷ್ಟು ಮಹಿಳೆಯರು ಇದುವರೆಗೆ ಇಂಟರ್ನೆಟ್ ಬಳಕೆ ಮಾಡಿಲ್ವಂತೆ!

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್‌) ನೀಡಿದ ಮಾಹಿತಿಯ ಪ್ರಕಾರ, ಭಾರತದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ. 60ಕ್ಕೂ ಹೆಚ್ಚು ಮಹಿಳೆಯರು ಇಂದಿನವರೆಗೂ ಇಂಟರ್‌ನೆಟ್‌ ಬಳಸಿಲ್ಲ ಎಂಬ ಅಂಶ ತಿಳಿದು ಬಂದಿದೆ.

ಇದನ್ನೂ ಓದಿ: ಗಣರಾಜ್ಯೋತ್ಸವ 2021: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮುಖ್ಯ ಅತಿಥಿ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ದೇಶದ ಒಟ್ಟು 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಧ್ಯಯನ ನಡೆಸಿದ್ದು, ಇಂಟರ್‌ನೆಟ್‌ ಬಳಸುವ ಮಹಿಳೆಯರ ಪ್ರಮಾಣ ಯಾವ್ಯಾವ ರಾಜ್ಯಗಳಲ್ಲಿ ಎಷ್ಟಿದೆ ಎಂಬ ಬಗ್ಗೆಯೂ ವರದಿ ಬಿಡುಗಡೆ ಮಾಡಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಸಮೀಕ್ಷೆ ನೀಡಿದ ವರದಿಯನ್ವಯ, ಆಂಧ್ರ ಪ್ರದೇಶ (ಶೇ 21), ಅಸ್ಸಾಂ (ಶೇ28.2), ಬಿಹಾರ (ಶೇ 20.6), ಗುಜರಾತ್‌ (ಶೇ 30.8), ಕರ್ನಾಟಕ (ಶೇ 35), ಮಹಾರಾಷ್ಟ್ರ(ಶೇ 38 ), ಮೇಘಾಲಯ (ಶೇ 34.7), ತೆಲಂಗಾಣ (ಶೇ 26.5), ತ್ರಿ‍ಪುರ ( ಶೇ 22.9), ಪಶ್ಚಿಮ ಬಂಗಾಳ (ಶೇ 25.5), ದಾದ್ರ ಮತ್ತು ನಗರ್‌ಹವೇಲಿ, ದಿಯು ಮತ್ತು ದಮನ್‌ (ಶೇ 36.7), ಅಂಡಮಾನ್‌ ಮತ್ತು ನಿಕೋಬಾರ್‌ (ಶೇ 34.8) ಮೇಲಿನ ಎಲ್ಲ ಪ್ರದೇಶಗಳಲ್ಲಿ ಇಂಟರ್‌ನೆಟ್‌ ಬಳಸಬಲ್ಲ ಮಹಿಳೆಯರ ಪ್ರಮಾಣ ಶೇ. 40ಕ್ಕಿಂತಲೂ ಕಡಿಮೆಯಿದೆ.

ಇನ್ನು ಮಹಿಳೆಯರಿಗೆ ಹೋಲಿಸಿದರೆ ಪುರುಷರು ಇಂಟರ್‌ನೆಟ್‌ ಬಳಕೆಯಲ್ಲಿ ಮುಂದಿದ್ದಾರೆ. ಆಂಧ್ರಪ್ರದೇಶ (ಶೇ 48.8) ಅಸ್ಸಾಂ (ಶೇ 42.3) ಬಿಹಾರ(ಶೇ 43.6) ಮೇಘಾಲಯ (ಶೇ 42.1) ತ್ರಿಪುರ (ಶೇ 45.7) ಪಶ್ಚಿಮ ಬಂಗಾಳ (ಶೇ 46.7) ಅಂಡಮಾನ್‌ ಮತ್ತು ನಿಕೋಬಾರ್‌ನಲ್ಲಿ (ಶೇ 46.5) ರಷ್ಟು ಪುರುಷರು ಇಂಟರ್‌ನೆಟ್‌ ಬಳಸುತ್ತಿದ್ದಾರೆ ಎಂದು ಸಮೀಕ್ಷಾ ವರದಿ ತಿಳಿಸಿದೆ.

FACT CHECK : “ದೆಹಲಿ ಗಲಭೆಯ ಬಂಧಿತರನ್ನು ಬಿಡುಗಡೆಗೊಳಿಸುವಂತೆ ಕೇಳಿಕೊಂಡ ರೈತರು!”

LEAVE A REPLY

Please enter your comment!
Please enter your name here