ಕೋವಿಡ್ ಸಮಸ್ಯೆಗಳನ್ನು ಎದುರಿಸಲು ಕೇಂದ್ರದಿಂದ ₹23,000 ಕೋಟಿ ಪ್ಯಾಕೇಜ್: ಆರೋಗ್ಯ ಸಚಿವ ಮಾಂಡವಿಯಾ

0
138
Tap to know MORE!

ನವದೆಹಲಿ: ಕೋವಿಡ್ ಎರಡನೇ ಅಲೆಯ ಸಂದರ್ಭ ಉಂಟಾದ ಸಮಸ್ಯೆಗಳನ್ನು ಎದುರಿಸಲು ಕೇಂದ್ರ ಸರ್ಕಾರದಿಂದ ₹23,000 ಕೋಟಿ ಪ್ಯಾಕೇಜ್ ನೀಡಲಾಗುವುದು ಎಂದು ನೂತನ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.

ಈ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಬಳಕೆ ಮಾಡುತ್ತವೆ. ₹23,000ಕೋಟಿಯಲ್ಲಿ ಸುಮಾರು ₹15,000 ಕೋಟಿಯನ್ನು ಕೇಂದ್ರದಿಂದ ಬಳಕೆ ಮಾಡಲಾಗುವುದು ಮತ್ತು ₹8,000 ಕೋಟಿಯನ್ನು ರಾಜ್ಯಗಳು ವಿನಿಯೋಗಿಸಲಿವೆ ಎಂದು ಅವರು ಹೇಳಿದರು.

ದ್ವಿತೀಯ ಪಿಯುಸಿ ರಿಪೀಟರ್ಸ್‌ಗಳೂ ಪರೀಕ್ಷೆ ಬರೆಯದೇ ಪಾಸ್ – ರಾಜ್ಯ ಸರ್ಕಾರ ನಿರ್ಧಾರ!

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಮುಂದಿನ ಒಂಬತ್ತು ತಿಂಗಳ ಅವಧಿಯ ಕಾರ್ಯ ತಂತ್ರ ಪ್ರಕಟಿಸಿದ ಅವರು, ಈ ಅವಧಿಯಲ್ಲಿ ನಾವು ಒಟ್ಟಾಗಿ ಕೋವಿಡ್ ವಿರುದ್ಧ ಹೋರಾಡಬೇಕಾಗಿದೆ. ರಾಜ್ಯಗಳಿಗೆ ಸಾಧ್ಯವಿರುವ ಎಲ್ಲ ರೀತಿಯ ನೆರವು ನೀಡುವುದು ನಮ್ಮ ಕೆಲಸವಾಗಿದೆ ಎಂದು ಮಾಂಡವಿಯಾ ತಿಳಿಸಿದರು.

ಇದೇವೇಳೆ, ಕೋವಿಡ್ ಮೂರನೆ ಅಲೆ ಎದುರಿಸಲು ದೇಶದ 736 ಜಿಲ್ಲೆಗಳಲ್ಲಿ ಮಕ್ಕಳ ಆರೈಕೆ ಕೇಂದ್ರಗಳನ್ನು ತೆರೆಯಲಾಗುವುದು. ಕೋವಿಡ್ ಪರಿಹಾರ ನಿಧಿಯಡಿ 20,000 ಐಸಿಯು ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here