ಮಾತೃರೂಪಿ ನನ್ನ ಅಕ್ಕ!

0
139
Tap to know MORE!

ಅಕ್ಕ ಎಂಬ ಎರಡು ಅಕ್ಷರ ಇದು ಬರೀ ಎರಡಕ್ಷರದಿಂದ ಕೂಡಿದ ಪದ ಅಲ್ಲ. ಇದು ತಾಯಿಯಂತ ಪ್ರೀತಿ, ವಾತ್ಸಲ್ಯ, ಮಮತೆ, ಗೌರವ, ಎಲ್ಲಕ್ಕೂ ಮಿಗಿಲಾಗಿ ಕಾಳಜಿ ತುಂಬಿದ ಎರಡು ಅಕ್ಷರವಾಗಿದೆ.

ಎಷ್ಟೇ ಕೋಪ ಜಗಳವಾಡಿ ಕಚ್ಚಾಡಿದರು ಕೂಡಾ ತಂಗಿ ಅಕ್ಕನಲ್ಲಿ ಸಹಾಯ ಮಾಡು ಎಂದು ಕೇಳುವಾಗ ಅಕ್ಕ ಇಲ್ಲ ಎಂದು ಹೇಳದೆ ಮಾಡಿಕೊಡುತ್ತಾಳೆ. ಅಕ್ಕ ಇವಳು ನನ್ನ ಬಾಲ್ಯದ ಸ್ನೇಹಿತೆ, ನೋವು – ನಲಿವು, ಆಟ -ಪಾಠ, ಎಲ್ಲದರಲೂ ಜೊತೆಗೂಡಿದಾಕೆ. ಬೀಳುವಾಗ , ಎಡವಿದಾಗ ಕೈ ಹಿಡಿದು ನಡೆಸಿದಾಕೆ.

ಅಕ್ಕ ನಾನು ಎಷ್ಟೇ ಬೈದರು ಎರಡು ಪೆಟ್ಟು ಹೊಡೆದರು ಮುನಿಸಿಕೊಳ್ಳದೆ ಎಲ್ಲವನ್ನು ಮರೆತು ಜೊತೆಗೂಡುವಳು. ಅವಳದ್ದೇ ಒಂದು ಪ್ರಪಂಚ ಎಂಬಂತೆ ಕನ್ನಡಿ ಮುಂದೆ ನಿಂತು ಬಿಡುವಳು. ಜಗಳವಾಡುವಾಗ ಎಷ್ಟೇ ಬೈದರು ಸಹ ಆ ಬೈಗುಳದ ಹಿಂದೆ ಪ್ರೀತಿ ಇದೆ.

ತಂಗಿಯ ಬಾಳಿಗೆ ಅಣ್ಣನೇ ಕಾವಲುಗಾರ

ನನ್ನ ಪ್ರತಿಯೊಂದು ಹೆಜ್ಜೆಗೂ ಆಕೆಯ ಬೆಂಬಲ ಜೊತೆಯಿರುವುದು, ನಾನು ಬೇಜಾರಾಗಿದ್ದಾಗ, ಕೋಪಿಸಿಕೊಂಡಾಗ ನನ್ನ ಬಳಿ ಬಂದು ಪ್ರೀತಿಯಿಂದ ಸಮಧಾನಿಸುತ್ತಾಳೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ನಮ್ಮಿಬ್ಬರಲಿ ನಾನೇ ಸ್ವಲ್ಪ ತುoಟಿ ಅವಳಿಗೆ ನಾನು ಬೈದರು ಸಹ ಅಷ್ಟೇ ಪ್ರೀತಿ, ಕಾಳಜಿಯಿಂದ ನೋಡುತ್ತೇನೆ. ನನ್ನ ಜೊತೆ ಜೊತೆಗೆ ಇದ್ದು ನನ್ನೆಲ್ಲ ಶ್ರಮದ ಪ್ರತಿಫಲದ ಹಿಂದೆ ಅವಳ ಶ್ರಮವು ಇರುತ್ತದೆ. ಏನೇ ಕೆಲಸ ಮಾಡುವಾಗಲು ನನಗೆ ಮಾರ್ಗಸೂಚಿಯಂತೆ ಹೇಳುವಳು ಹಾಗೆ ಮಾಡು ಎಂದು ಪದೇ ಪದೇ ಹೇಳುತಿರುವಾಗ ಕಿರಿಕಿರಿ ಎನಿಸಿದರು ಅವಳು ಹೇಳುವ ಮಾತಿನಲ್ಲಿ ಅರ್ಥವಿದೆ ಎಂದು ತಿಳಿಯುತ್ತದೆ.

ಇತ್ತೀಚೆಗೆ, ಸಂಬಂಧದಲ್ಲಿ ಎಷ್ಟೇ ಪ್ರೀತಿ, ಕಾಳಜಿ ಇದ್ದರೂ ಕೂಡ ಯಾವುದಾದರೊಂದು ಚಿಕ್ಕ ಕಾರಣದಿಂದ ಅಲ್ಲಿ ಜಗಳಗಳು ಶುರುವಾಗುತ್ತದೆ,ನಂತರ ಈ ವಾಟ್ಸಾಪ್ ಸ್ಟೇಟಸ್ ಗಳ ಮೂಲಕ ಸರಿಯಾಗುತ್ತದೆ. ನಮ್ಮ ಅಕ್ಕ – ತಂಗಿ ಸಂಬಂಧವು ಹಾಗೆ ನನ್ನ ಅಕ್ಕ ಯಾವುದೇ ವಿಷಯದಲ್ಲಾದರೂ ಜಗಳವಾಡಿದರು ಸಹ ವಾಟ್ಸಾಪ್ ಸ್ಟೇಟಸ್ ಹಾಕುವ ಮೂಲಕ ಸರಿಯಾಗುತ್ತೇವೆ.

ನನ್ನ ಅಕ್ಕ ನನಗೆ ಎಲ್ಲಾ ವಿಷಯದಲ್ಲೂ ಮತ್ತು ನನ್ನ ಸೋಲು – ಗೆಲುವಲ್ಲು ನನ್ನ ಜೊತೆಗಿದ್ದು ಸಹಾಯ ಮಾಡುತ್ತಾಳೆ. ನಾನು ಸೋತರೆ ಯಾರೇಷ್ಟೇ ಕಡೆಗಣಿಸಿದರೂ ಕೂಡಾ ಏನು ಆಗುದಿಲ್ಲ ನಾನಿದ್ದೇನೆ ಎಂದು ಕೈ ಹಿಡಿದುಧೈರ್ಯ ತುಂಬುವಳು ಅಕ್ಕ.

ತಂದೆ ತಾಯಿ ಎಷ್ಟೇ ಸಹಾಯ ಮಾಡಿದರು ಅಕ್ಕನ ಜೊತೆಗೂಡಿ ಅವಳ ಸಹಾಯ ಪಡೆದರೆ ಅದೊಂದು ಸಂತೋಷವೇ ಸರಿ. ಕೆಲವೊಂದು ವಿಷಯಗಳನ್ನು ತಂದೆ ತಾಯಿಯ ಜೊತೆ ಹೇಳಲು ಆಗದಿದ್ದರೂ, ವಿಚಾರಗಳನ್ನು ಅಕ್ಕನೊಂದಿಗೆ ಹಂಚಿಕೊಂಡರೆ ಮನಸಿಗಂತು ನೆಮ್ಮದಿ. ತಂದೆ ತಾಯಿಯ ಹಾಗೇ ಸಮಾನ ಪ್ರೀತಿಯನ್ನು ತೋರುವಳು, ತಾಯಿಯಂತೆ ನನ್ನನು ಕಾಳಜಿ ಮಾಡುವಳು ನನ್ನ ಅಕ್ಕ.

ರಕ್ಷಿತಾ ಕಟ್ಟತ್ತಿಲ, ದಾರೆಪಡ್ಪು
ರಥಬೀಧಿ ಮಂಗಳೂರು

LEAVE A REPLY

Please enter your comment!
Please enter your name here