ಮಾನವರ ಮೇಲೆ ಕೊರೊನಾ ಲಸಿಕೆ ಪ್ರಯೋಗ ಶುರು

0
221
ಪ್ರಾತಿನಿಧಿಕ ಚಿತ್ರ
Tap to know MORE!

ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದೆ. ವ್ಯಾಪಕ ಹರಡುವಿಕೆಯ ನಡುವಲ್ಲಿ ಹಲವು ದೇಶಗಳು ಕೊರೊನಾ ಲಸಿಕೆಯ ಪ್ರಯೋಗವನ್ನು ನಡೆಸುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಲಂಡನ್ ನ ಇಂಪೀರಿಯಲ್ ಕಾಲೇಜು ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಕೊರೊನಾ ವೈರಸ್ ಲಸಿಕೆಯ ಮಾನವ ಪ್ರಯೋಗ ಆರಂಭವಾಗಿದೆ. ಈ ಹೊಸ ಲಸಿಕೆಯನ್ನು ಮೊದಲ ಬಾರಿಗೆ ಮಾನವರ ಮೇಲೆ ಪ್ರಯೋಗಿಸುತ್ತಿದ್ದಾರೆ.

ಸೋಂಕು ನಿವಾರಿಸುವಲ್ಲಿ ಲಸಿಕೆಯು ಪರಿಣಾಮ ಬೀರುವುದೇ ಇಲ್ಲವೇ ಎಂದು ತಿಳಿಯಲು ಪ್ರಯೋಗ ನಡೆಸಲಾಗುತ್ತಿದೆ ಎಂದು ಪ್ರಯೋಗದ ನೇತೃತ್ವ ವಹಿಸಿರುವ ಪ್ರೊ. ರಾಬಿನ್ ಶಟ್ಟಾಕ್ ಹೇಳಿದ್ದಾರೆ. ಚೇತರಿಸಿಕೊಂಡ ವ್ಯಕ್ತಿಗಳ ರಕದಲ್ಲಿನ ಅತಿ ಪ್ರಬಲ ಪ್ರತಿಕಾಯಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ . ಇದನ್ನು ಬಳಸಿಕೊಂಡು ಲಸಿಕೆ ರೂಪದಲ್ಲಿ ನೀಡಿ ಕೊರೊನಾ ವೈರಸ್ ನಿಯಂತ್ರಿಸಬಹುದು ಎಂಬ ಆಶಾವಾದ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here